ADVERTISEMENT

ಟೆನಿಸ್‌: ನಿಕ್ಷೇಪ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:06 IST
Last Updated 3 ಜೂನ್ 2015, 20:06 IST

ಬೆಂಗಳೂರು: ಭರವಸೆಯ ಆಟಗಾರ ಕರ್ನಾಟಕದ ಬಿ.ಆರ್. ನಿಕ್ಷೇಪ್‌ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಐಟಿಎಫ್‌ ಜೂನಿಯರ್‌ ಟೆನಿಸ್‌ ಟೂರ್ನಿ ಗ್ರೇಡ್‌–4ರಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಸುರಾನ ಕಾಲೇಜಿನಲ್ಲಿ ಓದುತ್ತಿರುವ ನಿಕ್ಷೇಪ್‌  ಎರಡನೇ ಸುತ್ತಿನ ಪಂದ್ಯದಲ್ಲಿ  6–1, 6–2ರ ನೇರ ಸೆಟ್‌ಗಳಿಂದ ಜಪಾನ್‌ನ ಇನುಕ್ಯೂ ಎದುರು ಗೆಲುವು ಸಾಧಿಸಿದರು. ಎರಡೂ ಸೆಟ್‌ಗಳಲ್ಲಿ ಕರ್ನಾಟಕದ ಆಟಗಾರನಿಗೆ ಸುಲಭ ಜಯ ಲಭಿಸಿತು.

ಮಂಗಳವಾರ ನಡೆದ ಮೊದಲ ಸುತ್ತಿನಲ್ಲಿ 6–1, 6–0ರಲ್ಲಿ ಇಂಡೊನೇಷ್ಯಾದ ಎನ್ರಿಕ್‌ ಗಾರ್ಸಿಯಾ ಅವರನ್ನು ಮಣಿಸಿದ್ದರು. ನಿಕ್ಷೇಪ್‌ ಡಬಲ್ಸ್‌ನಲ್ಲಿ ಕೂಡಾ ಪೈಪೋಟಿ ನಡೆಸುತ್ತಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.