ADVERTISEMENT

ದೇಶದ ಮಹಿಳೆಯರಿಗೆ ಪ್ರಶಸ್ತಿ ಅರ್ಪಣೆ

ಪಿಟಿಐ
Published 22 ಆಗಸ್ಟ್ 2017, 19:28 IST
Last Updated 22 ಆಗಸ್ಟ್ 2017, 19:28 IST
ದೇಶದ ಮಹಿಳೆಯರಿಗೆ ಪ್ರಶಸ್ತಿ ಅರ್ಪಣೆ
ದೇಶದ ಮಹಿಳೆಯರಿಗೆ ಪ್ರಶಸ್ತಿ ಅರ್ಪಣೆ   

ನವದೆಹಲಿ: ಎರಡು ದಶಕಗಳ ಕಾಲ ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಪ್ರಮುಖ ಆಟಗಾರ್ತಿಯಾಗಿದ್ದ ಒಯಿನಮ್‌ ಬೆಂಬೆಮ್‌ ದೇವಿ ಅವರು ಅರ್ಜುನ ಪ್ರಶಸ್ತಿಯನ್ನು ದೇಶದ ಮಹಿಳೆಯರಿಗೆ ಅರ್ಪಿಸಿದ್ದಾರೆ.

‘ದೇಶದ ಮಹಿಳೆಯರು ದೈನಂದಿನ ಬದುಕಿನಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರೆಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಪ್ರಶಸ್ತಿಯ ಪ್ರಮುಖ ಭಾಗ ನನ್ನ ತಾಯಿ, ಕೋಚ್‌ಗಳು ಮತ್ತು ಸಹವರ್ತಿಗಳಿಗೆ ಸಲ್ಲುತ್ತದೆ’ ಎಂದು ಬೆಂಬೆಮ್‌ ದೇವಿ ಹೇಳಿದ್ದಾರೆ.

‘ದೇಶದಲ್ಲಿ ಮಹಿಳಾ ಫುಟ್‌ಬಾಲ್‌ ಹೊಸ ದಿಸೆಯಲ್ಲಿ ಹೆಜ್ಜೆ ಹಾಕಲು ನೆರವಾಗಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.