ADVERTISEMENT

ನಾಯಕ ವಿನಯ್ ದಾಖಲೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ಕೋಲ್ಕತ್ತ: ಬುಧವಾರ ಈಡನ್‌ ಗಾರ್ಡ್‌ನಲ್ಲಿ ಮುಕ್ತಾಯವಾದ ರಣಜಿ ಪಂದ್ಯದಲ್ಲಿ ಕರ್ನಾಟಕದ ನಾಯಕ ಆರ್. ವಿನಯ ಕುಮಾರ್ ಹೊಸ ದಾಖಲೆ ಬರೆದರು.

ಎರಡನೇ ಇನಿಂಗ್ಸ್‌ 34ಕ್ಕೆ6 ಮತ್ತು ಎರಡೂ ಇನಿಂಗ್ಸ್‌ ಸೇರಿ 90ಕ್ಕೆ9 ವಿಕೆಟ್ ಪಡೆದ ಸಾಧನೆಯು ಬಂಗಾಳ ತಂಡದ ವಿರುದ್ಧ ಕರ್ನಾಟಕದ ಬೌಲರ್ ಮಾಡಿದ ಅತ್ಯುತ್ತಮ ಸಾಧನೆ ಯಾಗಿದೆ. 1968-69ರಲ್ಲಿ ಇಎಎಸ್ ಪ್ರಸನ್ನ (41ಕ್ಕೆ6) 1995-–96ರಲ್ಲಿ ಬೆಂಗಳೂರಿ ನಲ್ಲಿ ಸುನಿಲ್ ಜೋಶಿ (94ಕ್ಕೆ8) ಈ ಸಾಧನೆ ಮಾಡಿದ್ದರು.

ಜಯದ ಆರಂಭ
ಋತುವಿನ ಮೊದಲ ಎರಡೂ ಪಂದ್ಯಗಳಲ್ಲಿ  ವಿಜಯ ಗಳಿಸಿರು ವುದು ಉತ್ತಮ ಆರಂಭ ಸಿಕ್ಕಂತಾಗಿದೆ ಎಂದು ಕರ್ನಾಟಕ ತಂಡದ ಆರ್. ವಿನಯಕುಮಾರ್ ಹೇಳಿದರು.

ಪಂದ್ಯದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಬಂಗಾಳ ತಂಡವು ನಮಗೆ ಸುಲಭವಾಗಿ ಶರಣಾಯಿತು ಎಂದು ಹೇಳುವುದು ಸರಿಯಲ್ಲ. ಆದರೆ, ನಮ್ಮ ಬೌಲಿಂಗ್ ಶಕ್ತಿ ಮತ್ತು ಫೀಲ್ಡರ್‌ಗಳ ಬೆಂಬಲ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಲ್ಲದೇ ಶ್ರೇಯಸ್ ಗೋಪಾಲ್ ಶತಕ ಅತ್ಯಂತ ಪ್ರಮುಖವಾದ ಘಟ್ಟವಾಗಿತ್ತು.11 ಆಟಗಾರರೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇರುವುದು ತಂಡದ ಬಲ ಹೆಚ್ಚಿಸಿದೆ’ ಎಂದರು.

ಈ ಸಂದರ್ಭದಲ್ಲಿ ಇದ್ದ ರಾಬಿನ್ ಉತ್ತಪ್ಪ, ‘ಗೆಲ್ಲುವುದು ನಮ್ಮ ತಂಡದ ಎಲ್ಲ ಆಟಗಾರರ ಹವ್ಯಾಸವಾಗಿದೆ. ಆರೋಗ್ಯಯುತ ವಾತಾವರಣ ಇರುವ ಡ್ರೆಸ್ಸಿಂಗ್ ರೂಮ್ ನಮ್ಮದು. ನಮ್ಮಲ್ಲಿಯೇ ಪರಸ್ಪರ ಆರೋಗ್ಯಯುತ ಪೈಪೋಟಿಯಿದೆ. ಇದರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ನಾಯಕನಾಗಿ ವಿನಯ್ ನಮಗೆಲ್ಲ ಉತ್ಸಾಹ ತುಂಬುತ್ತಿದ್ದಾರೆ. ರಣಜಿ ಮಾತ್ರ ವಲ್ಲ ಎಲ್ಲ ಟೂರ್ನಿಗಳಲ್ಲಿಯೂ ಗೆಲ್ಲುವಂತಹ ಛಲ ನಮ್ಮದು. ಎಲ್ಲರಲ್ಲಿಯೂ ಉತ್ತಮ ಪ್ರತಿಭೆ ಮತ್ತು ಸಕಾರಾತ್ಮಕ ನಡವಳಿಕೆ ಇದೆ’ ಎಂದು ಹೇಳಿದರು. ಮುಂದಿನ ಪಂದ್ಯ ರೈಲ್ವೇಸ್ ಎದುರು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.