ADVERTISEMENT

ಪೆಲೆ ಕಾರ್ಯಕ್ರಮಕ್ಕೆ ರಹಮಾನ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST
ಬ್ರೆಜಿಲ್‌ನ ಪೆಲೆ
ಬ್ರೆಜಿಲ್‌ನ ಪೆಲೆ   

ಕೋಲ್ಕತ್ತ (ಪಿಟಿಐ): ಫುಟ್‌ಬಾಲ್‌ ದಂತಕಥೆ ಬ್ರೆಜಿಲ್‌ನ ಪೆಲೆ ಮುಂದಿನ ವಾರ ಭಾರತಕ್ಕೆ ಬರಲಿದ್ದು ಕೋಲ್ಕತ್ತದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ ದ್ದಾರೆ. ಅವರ ಜೊತೆಗೆ ಸಂಗೀತ ನಿರ್ದೇಶಕ ಎ.ಆರ್‌. ರಹಮಾನ್‌ ಕೂಡ ಇರಲಿದ್ದಾರೆ.

74 ವರ್ಷದ ಪೆಲೆ ಅಕ್ಟೋಬರ್‌ 12ರಂದು ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಭಾಗವಹಿಸಲಿದ್ದಾರೆ.

‘ಪೆಲೆ ಅವರನ್ನು ಭೇಟಿಯಾಗಲು ರಹಮಾನ್‌ ತುಂಬಾ ಆಸಕ್ತಿ ಹೊಂದಿ ದ್ದಾರೆ. ಈ ಬಗ್ಗೆ ಅವರು ನಮ್ಮಲ್ಲಿ ಹೇಳಿ ಕೊಂಡಿದ್ದಾರೆ. ಅ. 23ರಂದು ಪೆಲೆ ಜನ್ಮದಿನವಿರುವ ಕಾರಣ ರಹಮಾನ್‌ ಹಾಡಲಿದ್ದಾರೆ. ಇದನ್ನು ಪ್ರತಿಯೊಬ್ಬರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ’ ಎಂದು ಸಂಘಟಕರು ತಿಳಿಸಿದ್ದಾರೆ.

ಅ. 11 ರಂದು ಬೆಳಿಗ್ಗೆ ಪೆಲೆ ಭಾರ ತಕ್ಕೆ ಬರಲಿದ್ದು ಮೂರು ದಿನ ಇಲ್ಲಿಯೇ ಇರಲಿದ್ದಾರೆ. ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಕೇರಳ ಬ್ಲಾಸ್ಟರ್ಸ್‌ ಮತ್ತು ಅಟ್ಲೆಟಿಕೊ ಡಿ ಕೋಲ್ಕತ್ತ ನಡುವಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಪೆಲೆ ಶತಮಾನದ ಶ್ರೇಷ್ಠ ಆಟಗಾರ ಗೌರವ ಪಡೆದಿದ್ದರು. 1958, 1962 ಮತ್ತು 1970ರಲ್ಲಿ ಬ್ರೆಜಿಲ್‌ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಆಗ ಪೆಲೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.