ADVERTISEMENT

ಫಿಫಾ ರ‍್ಯಾಂಕಿಂಗ್‌: 105ನೇ ಸ್ಥಾನದಲ್ಲಿ ಮುಂದುವರಿದ ಭಾರತ

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಫಿಫಾ ರ‍್ಯಾಂಕಿಂಗ್‌: 105ನೇ ಸ್ಥಾನದಲ್ಲಿ ಮುಂದುವರಿದ ಭಾರತ
ಫಿಫಾ ರ‍್ಯಾಂಕಿಂಗ್‌: 105ನೇ ಸ್ಥಾನದಲ್ಲಿ ಮುಂದುವರಿದ ಭಾರತ   

ನವದೆಹಲಿ: ಭಾರತ ಫುಟ್‌ಬಾಲ್ ತಂಡ ಇತ್ತೀಚೆಗೆ ಬಿಡುಗಡೆಯಾದ ಫಿಫಾ ರ‍್ಯಾಂಕಿಂಗ್ ಪಟ್ಟಿಯಲ್ಲಿ 105ನೇ ಸ್ಥಾನದಲ್ಲಿ ಮುಂದುವರಿದಿದೆ.

ತವರಿನಲ್ಲಿ ನಡೆದ ಎಎಫ್‌ಸಿ ಏಷ್ಯನ್‌ ಕಪ್ ಅರ್ಹತಾ ಪಂದ್ಯದಲ್ಲಿ ಭಾರತ ತಂಡ 2–2 ಗೋಲುಗಳಲ್ಲಿ ಮ್ಯಾನ್ಮಾರ್ ಎದುರು ಡ್ರಾ ಮಾಡಿಕೊಂಡಿತ್ತು. ಏಷ್ಯಾ ದೇಶಗಳಲ್ಲಿ ಭಾರತ 15ನೇ ಸ್ಥಾನದಲ್ಲಿದೆ.

ಜೋರ್ಡನ್‌ ಹಾಗೂ ಉತ್ತರ ಕೊರಿಯಾ ತಂಡಗಳನ್ನು ಹಿಂದಿಕ್ಕಿದೆ. ಇರಾನ್ ಅಗ್ರಸ್ಥಾನದಲ್ಲಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಜರ್ಮನಿ ಮೊದಲ ಸ್ಥಾನದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.