ADVERTISEMENT

‘ಬ್ಯಾಟಿಂಗ್‌ ಸೆಹ್ವಾಗ್‌ ಅವರಂತೆ– ಆಕ್ರಮಣಶೀಲತೆ ಕೊಹ್ಲಿಯಂತೆ’: ಹರ್ಮನ್‌ ಬ್ಯಾಟಿಂಗ್‌ ಬಗ್ಗೆ ಸಹೋದರಿ ಮೆಚ್ಚುಗೆ

ಏಜೆನ್ಸೀಸ್
Published 21 ಜುಲೈ 2017, 11:21 IST
Last Updated 21 ಜುಲೈ 2017, 11:21 IST
‘ಬ್ಯಾಟಿಂಗ್‌ ಸೆಹ್ವಾಗ್‌ ಅವರಂತೆ– ಆಕ್ರಮಣಶೀಲತೆ ಕೊಹ್ಲಿಯಂತೆ’: ಹರ್ಮನ್‌ ಬ್ಯಾಟಿಂಗ್‌ ಬಗ್ಗೆ ಸಹೋದರಿ ಮೆಚ್ಚುಗೆ
‘ಬ್ಯಾಟಿಂಗ್‌ ಸೆಹ್ವಾಗ್‌ ಅವರಂತೆ– ಆಕ್ರಮಣಶೀಲತೆ ಕೊಹ್ಲಿಯಂತೆ’: ಹರ್ಮನ್‌ ಬ್ಯಾಟಿಂಗ್‌ ಬಗ್ಗೆ ಸಹೋದರಿ ಮೆಚ್ಚುಗೆ   

ಚಂಡೀಗಡ: ಭಾರತ, ಆಸ್ಟ್ರೇಲಿಯಾ ನಡುವಣ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಥಾಲಿ ಪಡೆ ಫೈನಲ್‌ ತಲುಪಲು ಕಾರಣರಾದ ಹರ್ಮನ್‌ ಪ್ರೀತ್‌ ಕೌರ್‌ ಬ್ಯಾಟಿಂಗ್‌ ಬಗ್ಗೆ ಅವರ ಸಹೋದರಿ ಹೆಮ್ಜಿತ್‌ ಕೌರ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

‘ಕೌರ್‌ ಬ್ಯಾಟಿಂಗ್‌ ಮಾಡಿದ್ದು ವಿರೇಂದ್ರ ಸೆಹ್ವಾಗ್‌ ಅವರ ಹಾಗೆ, ಆಕ್ರಮಣಕಾರಿಯಾಗಿ ಮುನ್ನುಗಿದ್ದು ವಿರಾಟ್‌ ಕೊಹ್ಲಿ ಅವರಂತೆ’ ಎಂದು ಹೆಮ್ಜಿತ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಬಾಲ್ಯದಿಂದಲೂ ಹುಡುಗರ ಜತೆಯಲ್ಲಿಯೇ ಕ್ರಿಕೆಟ್‌ ಆಡುತ್ತಾ ಬೆಳೆದ ಕೌರ್‌, ಅಂಗಳದಲ್ಲಿ ಯಾವಾಗಲೂ ಕೊಹ್ಲಿಯಂತೆ ಆಕ್ರಮಣಶೀಲ ಪ್ರವೃತ್ತಿ ಹೊಂದಿರುತ್ತಾಳೆ. ಆಕೆಯ ರನ್‌ ದಾಹ ಕೊನೆಯಾಗುವುದೇ ಇಲ್ಲ. ಕಳೆದ ಪಂದ್ಯದಲ್ಲಿ ಅದನ್ನು ಪ್ರತಿಧ್ವನಿಸುವಂತಹ ಆಟ ಆಕೆಯ ಬ್ಯಾಟಿನಿಂದ ಮೂಡಿ ಬಂದಿದೆ’

ADVERTISEMENT

(ಐಸಿಸಿ–ಟ್ವಿಟರ್‌ ಚಿತ್ರ)

‘ಸೆಹ್ವಾಗ್‌ ಬ್ಯಾಟಿಂಗ್‌ನಿಂದ ಸ್ಫೂರ್ತಿ ಪಡೆದಿರುವ ಕೌರ್‌ ಅವರಂತೆಯೇ ಬ್ಯಾಟಿಂಗ್‌ ಮಾಡುವುದನ್ನು ರೂಢಿಸಿಕೊಂಡಿದ್ದಾಳೆ. ಅಂಗಳದ ಹೊರಗೆ ಶಾಂತಚಿತ್ತವಾಗಿರುತ್ತಾಳೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಭಾರತ ಪರ ಅತ್ಯುತ್ತಮವಾಗಿ ಬ್ಯಾಟ್‌ ಬೀಸಿದ್ದ ಕೌರ್‌, ಕೇವಲ 115 ಎಸೆತಗಳಲ್ಲಿ 171ರನ್‌ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ 20ಬೌಂಡರಿ ಮತ್ತು 7ಸಿಕ್ಸರ್‌ಗಳಿದ್ದವು. ಇದರ ಬಲದೊಂದಿಗೆ ನಿಗದಿತ 42 ಓವರ್‌ಗಳಲ್ಲಿ ಮಿಥಾಲಿ ಪಡೆ 281ರನ್‌ ಕಲೆಹಾಕಿ ಆರು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾಕ್ಕೆ ಬೃಹತ್‌ ಮೊತ್ತದ ಸವಾಲು ನೀಡಿತ್ತು.

ಗುರಿ ಬೆನ್ನತ್ತಿದ್ದ ಮೆಗ್‌ಲ್ಯಾನಿಂಗ್‌ ಪಡೆ ಭಾರತಕ್ಕೆ ನಿಕಟ ಪೈಪೋಟಿ ನೀಡಿ 245ರನ್‌ ಗಳಿಸಿ ಆಲೌಟ್‌ ಆಗಿತ್ತು. ಹಾಗಾಗಿ ಭಾರತ 36ರನ್‌ಗಳ ಜಯ ಸಾಧಿಸಿ ಮಹಿಳಾ ವಿಶ್ವಕಪ್‌ ಪಂದ್ಯವಾಳಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಭಾನುವಾರ(ಜುಲೈ 23) ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.