ADVERTISEMENT

ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಭಾರಿ ಜಯ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST

ಮಾಲಿ, ಮಾಲ್ಡಿವ್‌್ಸ : ಭಾರತ ತಂಡದವರು ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌ನ ನಾಲ್ಕನೇ ಮತ್ತು ಅಂತಿಮ ರೌಂಡ್‌ ರಾಬಿನ್‌ ಲೀಗ್‌ ಪಂದ್ಯದಲ್ಲಿ ಜಯ ಸಾಧಿಸಿದರು.

ಮಂಗಳವಾರ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ನೇಪಾಳ 90–44ರ ಅಂತರದಿಂದ ಸೋಲುಂಡಿತು. ಈ ಜಯದೊಂದಿಗೆ ಭಾರತ ಆಗಸ್ಟ್ ಎಂಟರಿಂದ 20ರ ವರೆಗೆ ಲೆಬನಾನ್‌ನಲ್ಲಿ ನಡೆಯಲಿರುವ ಫಿಬಾ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಗಳಿಸಿತು. 

ಮೊದಲ ಕ್ವಾರ್ಟರ್‌ನಲ್ಲಿ 19–0 ಮುನ್ನಡೆ ಗಳಿಸಿದ ಭಾರತ ಉಳಿದ ಮೂರೂ ಕ್ವಾರ್ಟರ್‌ಗಳಲ್ಲಿ ಕೂಡ ಪ್ರಭಾವಿ ಆಟವಾಡಿ ಮುನ್ನಡೆ ಹೆಚ್ಚಿಸಿಕೊಂಡಿತು. ವಿಶೇಷ್ ಭೃಗುವಂಶಿ ಒಟ್ಟು 22 ಪಾಯಿಂಟ್ ಗಳಿಸಿದರೆ ಬಿ.ಕೆ.ಅನಿಲ್‌ಕುಮಾರ್‌ 16 ಪಾಯಿಂಟ್ ತಂದುಕೊಟ್ಟರು.

ADVERTISEMENT

ದ್ವಿತೀಯಾರ್ಧದಲ್ಲಿ ಜೀವನಾಥಮ್ ಪಾಂಡಿ, ಮುಯಿನ್ ಬೆಕ್‌ ಮತ್ತು ವಿಶಾಲ್ ಕುಮಾರ್ ಗುಪ್ತಾ ಅಮೋಘ ಆಟವಾಡಿ ಪಾಯಿಂಟ್‌ಗಳನ್ನು ತಂದುಕೊಟ್ಟರು. ನೇಪಾಳ ಪರವಾಗಿ ಆಶಿಮ್ ಶ್ರೇಷ್ಠ ಅವರು ಏಕಾಂಗಿ ಹೋರಾಟಕ್ಕೆ  ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.