ADVERTISEMENT

‘ಭಾರತ ಅಗ್ರಪಟ್ಟದಲ್ಲಿ ಮುಂದುವರಿಯಲಿದೆ’

ಪಿಟಿಐ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST

ಕೊಲಂಬೊ : ಭಾರತ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಪಟ್ಟದಲ್ಲಿ ಮುಂದುವರಿಯಲಿದೆ. ವಿಶ್ವದಲ್ಲಿಯೇ ಶ್ರೇಷ್ಠ ತಂಡವೆಂಬ ಅಗ್ಗಳಿಕೆಯನ್ನು ಉಳಿಸಿಕೊಳ್ಳಲಿದೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನಿಲ್ ಕುಂಬ್ಳೆ ವಿವಾದಾತ್ಮಕ ನಿರ್ಗಮನದ ನಂತರ ಮುಖ್ಯ ಕೋಚ್ ಸ್ಥಾನಕ್ಕೆ ನೇಮಕವಾಗಿರುವ ರವಿಶಾಸ್ತ್ರಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ತಂಡದ ಎಲ್ಲ ಆಟಗಾರರೂ ವೃತ್ತಿಪರರಾಗಿದ್ದಾರೆ. ಅವರಿಗೆ ತಮ್ಮ ಹೊಣೆಯ ಅರಿವು ಚೆನ್ನಾಗಿದೆ. ಕಣಕ್ಕಿಳಿದ ಮೇಲೆ ಅವರು ಉತ್ತಮ ಆಟದ ಮೂಲಕ ಪ್ರಾಬಲ್ಯ ಸಾಧಿಸುವ ಗುಣ ಹೊಂದಿದ್ದಾರೆ’ ಎಂದು ಹೇಳಿದರು.

’ಆಟಗಾರರು ತಮ್ಮ ಮನದಲ್ಲಿರುವ ಭಯ ಮತ್ತು ಹಿಂಜರಿಕೆಗಳನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಆಟವಾಡುವಂತೆ ಉತ್ತೇಜಿಸುವುದಷ್ಟೆ ನನ್ನ ಕೆಲಸ. ಪ್ರತಿ ಯೊಬ್ಬ ಆಟಗಾರನಲ್ಲಿರುವ ಪ್ರತಿಭೆಗೆ ತಕ್ಕಂತೆ ಅವರನ್ನು ಪ್ರೋತ್ಸಾಹಿಸುವ ಮೂಲಕ ಶ್ರೇಷ್ಠ ಆಟವಾಡುವಂತೆ ಮಾಡುವುದು’ ಎಂದರು.

ADVERTISEMENT

’ಯಾವುದೇ ತಂಡವು ತನ್ನ ತವರಿನಲ್ಲಿ ಚೆನ್ನಾಗಿ ಆಡುವ ಪ್ರಯತ್ನ ಮಾಡುವುದು ಸಹಜ. ತಂಡದ ಆಟಗಾರರಲ್ಲಿ ಆತ್ಮವಿಶ್ವಾಸವೂ ಹೆಚ್ಚಿ ರುತ್ತದೆ. ಅದರಿಂದಾಗಿ ಶ್ರೀಲಂಕಾ ತಂಡ ವನ್ನು ಹಗುರವಾಗಿ ಪರಿಗಣಿ ಸುವಂತಿಲ್ಲ. ತವರಿನಲ್ಲಿ ಅವರು ಉತ್ತಮವಾಗಿ ಆಡಿರುವ ದಾಖಲೆಗಳು ಇವೆ. ಯುವ ಆಟಗಾರರು ಪರಿಪೂರ್ಣವಾಗಿ ಆಡುವ ನಿರೀಕ್ಷೆ ಇದೆ’ ಎಂದು 55 ವರ್ಷದ ಶಾಸ್ತ್ರಿ ಹೇಳಿದರು.

ಹೋದ ವರ್ಷ ಭಾರತ ತಂಡವು ತನ್ನ ತವರಿನಲ್ಲಿ ನಡೆದಿದ್ದ 13 ಟೆಸ್ಟ್‌ಗಳಲ್ಲಿ ಹತ್ತು ಪಂದ್ಯಗಳನ್ನು ಗೆದ್ದಿತ್ತು. ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ತಂಡಗಳ ಎದುರು ಯಶಸ್ಸು ಸಾಧಿಸಿತ್ತು.ನಂತರ ಲಂಡನ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಸೋತಿತ್ತು. ವಿರಾಟ್ ಕೊಹ್ಲಿ ಬಳಗವು ಸುಮಾರು ಒಂದು ವರ್ಷದ ನಂತರ ಭಾರತದಿಂದ ಹೊರಗೆ ಟೆಸ್ಟ್ ಸರಣಿ ಆಡಲಿದೆ.

ಸ್ಪೂರ್ತಿಯ ಸೆಲೆ ಶಾಸ್ತ್ರಿ: ಅಶ್ವಿನ್
‘ಕಳೆದ ಬಾರಿ ಇಲ್ಲಿ (ಗಾಲ್) ನಾವು ಟೆಸ್ಟ್ ಸೋತಿದ್ದೆವು. ಆಗ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರು ನೀಡಿದ್ದ ಸಲಹೆಗಳು ನಮ್ಮ ಆತ್ಮವಿ ಶ್ವಾಸವನ್ನು ಹೆಚ್ಚಿಸಿದ್ದವು. ನಂತರದ ಪಂದ್ಯಗಳಲ್ಲಿ ನಮ್ಮ ತಂಡ ಜಯಿಸಿತ್ತು. ರವಿ ಅವರು ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿರುವುದು ನಮ್ಮ ಶಕ್ತಿ ಇಮ್ಮಡಿಸಲು ಕಾರಣವಾಗಿದೆ. ಅವ ರೊಬ್ಬ ಅದ್ಭುತ ವ್ಯಕ್ತಿ’ ಎಂದು  ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿ ದ್ದಾರೆ. ‘ಅವರು ಆಟದ ಕುರಿತ ನಮ್ಮ ಸಂದೇಹಗಳನ್ನು ಪರಿಹರಿಸುವ ಶೈಲಿಯು ಉತ್ತಮವಾಗಿದೆ. ಅವರ ಮಾರ್ಗದರ್ಶ ನದಲ್ಲಿ ತಂಡವು ಇನ್ನೂ ಉನ್ನತವಾದ ಸಾಧನೆ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.