ADVERTISEMENT

ರೋಹಿತ್‌, ಪಾರ್ಥಿವ್‌ಗೆ ನಾಯಕತ್ವ

ದೇವಧರ್‌ ಟ್ರೋಫಿಗೆ ತಂಡಗಳು ಪ್ರಕಟ; ರಾಜ್ಯದ ಮೂವರಿಗೆ ಸ್ಥಾನ

ಪಿಟಿಐ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ರೋಹಿತ್‌, ಪಾರ್ಥಿವ್‌ಗೆ ನಾಯಕತ್ವ
ರೋಹಿತ್‌, ಪಾರ್ಥಿವ್‌ಗೆ ನಾಯಕತ್ವ   

ನವದೆಹಲಿ : ಅನುಭವಿ ಆಟಗಾರ ರೋಹಿತ್‌ ಶರ್ಮಾ ಮತ್ತು ಪಾರ್ಥಿವ್‌ ಪಟೇಲ್‌ ಅವರು ಮುಂಬರುವ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕ್ರಮವಾಗಿ ಇಂಡಿಯಾ ‘ಬ್ಲೂ’ ಮತ್ತು ಇಂಡಿಯಾ ‘ರೆಡ್‌’ ತಂಡಗಳನ್ನು ಮುನ್ನಡೆಸಲಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿ ಮಂಗಳವಾರ 28 ಸದಸ್ಯರ ತಂಡವನ್ನು ಪ್ರಕಟಿಸಿದೆ. ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಮಯಂಕ್‌ ಅಗರವಾಲ್‌ ಅವರು ‘ರೆಡ್‌’ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.  ರಾಜ್ಯದ ವೇಗಿ ಪ್ರಸಿದ್ಧ ಕೃಷ್ಣ ಅವರನ್ನೂ ಆಯ್ಕೆಗೆ ಪರಿಗಣಿಸಲಾಗಿದ್ದು ಅವರು ‘ಬ್ಲೂ’ ತಂಡದ ಪರ ಕಣಕ್ಕಿಳಿಯಲಿದ್ದಾರೆ.  ಮಾರ್ಚ್‌ 25 ರಿಂದ 29ರವರೆಗೆ ವಿಶಾಖಪಟ್ಟಣ ದಲ್ಲಿ ನಡೆಯುವ ಟೂರ್ನಿ ಯಲ್ಲಿ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದಿರುವ ತಮಿಳುನಾಡು ತಂಡ ಕೂಡ  ಆಡಲಿದೆ.

ಅನುಭವಿ ಆಟಗಾರರಾದ ಮಹೇಂದ್ರಸಿಂಗ್‌ ದೋನಿ, ಆಶಿಶ್‌ ನೆಹ್ರಾ  ಮತ್ತು ಯುವರಾಜ್‌ ಸಿಂಗ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ADVERTISEMENT

ಮುಷ್ತಾಕ್‌ ಅಲಿ ಟ್ರೋಫಿ ಮತ್ತು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಆಫ್‌ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಅವರು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ‘ ಬ್ಲೂ’ ತಂಡದಲ್ಲಿ ಆಡಲಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ ಭಾರತ ತಂಡದಿಂದ ಸ್ಥಾನ ಕಳೆದುಕೊಂಡಿರುವ ದೆಹಲಿಯ ಶಿಖರ್‌ ಧವನ್‌ ಅವರು ಪಾರ್ಥಿವ್‌ ಸಾರಥ್ಯದ ‘ರೆಡ್‌’ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.  ಆಯ್ಕೆ ಸಮಿತಿ ಮುಂಬ ರುವ ಚಾಂಪಿ ಯನ್ಸ್‌ ಟ್ರೋಫಿಯನ್ನು ಗಮನದಲ್ಲಿಟ್ಟು ಕೊಂಡು    ತಂಡವನ್ನು ಆಯ್ಕೆ ಮಾಡಿ ದ್ದು ಹೊಸಬರಿಗೂ ಮಣೆ ಹಾಕಿದೆ.

ತಂಡಗಳು ಇಂತಿವೆ: ಇಂಡಿಯಾ ‘ಬ್ಲೂ’: ರೋಹಿತ್‌ ಶರ್ಮಾ (ನಾಯಕ), ಮನದೀಪ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌, ಅಂಬಟಿ ರಾಯುಡು, ಮನೋಜ್‌ ತಿವಾರಿ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ದೀಪಕ್‌ ಹೂಡಾ, ಹರ ಭಜನ್‌ ಸಿಂಗ್‌, ಕೃಣಾಲ್‌ ಪಾಂಡ್ಯ, ಶಹಬಾಜ್‌ ನದೀಮ್‌, ಸಿದ್ದಾರ್ಥ್‌ ಕೌಲ್‌, ಶಾರ್ದೂಲ್‌ ಠಾಕೂರ್‌, ಪ್ರಸಿದ್ಧ ಕೃಷ್ಣ ಮತ್ತು ಪಂಕಜ್‌ ರಾವ್‌.

ಇಂಡಿಯಾ ‘ರೆಡ್‌’: ಪಾರ್ಥಿವ್‌ ಪಟೇಲ್‌ (ನಾಯಕ/ವಿಕೆಟ್‌ ಕೀಪರ್‌), ಶಿಖರ್‌ ಧವನ್‌, ಮನೀಷ್‌ ಪಾಂಡೆ, ಮಯಂಕ್‌ ಅಗರವಾಲ್‌, ಕೇದಾರ್‌ ಜಾಧವ್‌, ಇಶಾಂಕ್‌ ಜಗ್ಗಿ, ಗುರುಕೀರತ್‌ ಸಿಂಗ್‌ ಮಾನ್‌, ಅಕ್ಷರ್‌ ಪಟೇಲ್‌, ಅಕ್ಷಯ್‌ ಕಾರ್ನೆವಾರ್‌, ಅಶೋಕ್‌ ದಿಂಡಾ, ಕುಲವಂತ್‌ ಖೆಜ್ರೋಲಿಯಾ, ಧವಳ್‌ ಕುಲಕರ್ಣಿ,ಗೋವಿಂದ ಪೊದ್ದಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.