ADVERTISEMENT

ಲಾರ್ಡ್ಸ್‌ನಲ್ಲಿ ಮತ್ತೆ ಇತಿಹಾಸ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ಲಾರ್ಡ್ಸ್‌:  ವೇಗಿ ಇಶಾಂತ್‌ ಶರ್ಮ ಅವರ ಪ್ರಭಾವಿ ಬೌಲಿಂಗ್‌ ಬಲದಿಂದ ಭಾರತ ಕ್ರಿಕೆಟ್ ತಂಡವು 28 ವರ್ಷಗಳ ಬಳಿಕ  ‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಅಂಗಳದಲ್ಲಿ ಗೆಲುವು ಪಡೆದು ಮತ್ತೆ ಐತಿಹಾಸಿಕ ಸಾಧನೆ ಮಾಡಿತು.

ಗೆಲುವಿಗೆ 319 ರನ್‌ ಗುರಿ ಪಡೆದಿದ್ದ ಆತಿಥೇಯರು ಭಾನುವಾರದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಆದ್ದರಿಂದ ಭಾರತಕ್ಕೆ ಗೆಲುವು ನಿರೀಕ್ಷಿತವೇ ಆಗಿತ್ತು. ಇಶಾಂತ್‌ ಶರ್ಮ ಏಳು ವಿಕೆಟ್‌ ಕಬಳಿಸಿ ಜಯವನ್ನು ಮತ್ತಷ್ಟು ಸುಲಭಗೊ­ಳಿಸಿದರು. ಇದರಿಂದ ಭಾರತ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಪಡೆಯಿತು. ಕಪಿಲ್ ದೇವ್‌ ನೇತೃತ್ವದ  ತಂಡ 1986ರಲ್ಲಿ ಲಾರ್ಡ್ಸ್‌ ಅಂಗಳದಲ್ಲಿ ಮೊದಲ ಸಲ ಟೆಸ್ಟ್‌ ಜಯಿಸಿತ್ತು.

ದೋನಿ ಸಾಧನೆ:  ಆತಿಥೇಯರನ್ನು ಅವರದ್ದೇ ನೆಲದಲ್ಲಿ ಎರಡು ಬಾರಿ ಸೋಲಿಸಿದ ಭಾರತ ತಂಡದ ಎರಡನೇ ನಾಯಕ ಎನ್ನುವ ಕೀರ್ತಿ ದೋನಿ ಪಾಲಾಯಿತು. ಈ ಮೂಲಕ ಅವರು ಕಪಿಲ್‌ ದೇವ್‌ ದಾಖಲೆ ಸರಿಗಟ್ಟಿದರು. 2007ರಲ್ಲಿ ದೋನಿ ಸಾರಥ್ಯದ ತಂಡ ಇಂಗ್ಲೆಂಡ್‌ ಎದುರು 7 ವಿಕೆಟ್‌ ಜಯ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.