ADVERTISEMENT

ಶರತ್ ಕಮಲ್‌ಗೆ ಗೆಲುವಿನ ಭರವಸೆ

ಪಿಟಿಐ
Published 19 ಮಾರ್ಚ್ 2018, 20:30 IST
Last Updated 19 ಮಾರ್ಚ್ 2018, 20:30 IST
ಶರತ್ ಕಮಲ್‌ ಅವರ ಆಟದ ಭಂಗಿ
ಶರತ್ ಕಮಲ್‌ ಅವರ ಆಟದ ಭಂಗಿ   

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಈ ಹಿಂದೆ ನಡೆದ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್‌ ಕಮಲ್‌ ಈ ಬಾರಿಯೂ ಚಿನ್ನ ಗೆಲ್ಲುವ ಭರವಸೆ ಹೊಂದಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಗಳಿಸಿರುವ ಒಟ್ಟು ಮೂರು ಚಿನ್ನದ ಪದಕಗಳ ಪೈಕಿ ಎರಡು ಆಸ್ಟ್ರೇಲಿಯಾದಲ್ಲಿ ಲಭಿಸಿವೆ. ಇದು ಅವರ ಭರವಸೆಗೆ ಕಾರಣ.

35 ವರ್ಷದ ಶರತ್‌ ಕಮಲ್‌ ಈ ಬಾರಿಯೂ ಭಾರತದ ಟೇಬಲ್ ಟೆನಿಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದು ಅವರು ಭಾಗವಹಿಸುವ ಕೊನೆಯ ಕಾಮನ್‌ವೆಲ್ತ್ ಗೇಮ್ಸ್‌ ಆಗುವ ಸಾಧ್ಯತೆ ಇದೆ.

ADVERTISEMENT

‘ಸಿಂಗಲ್ಸ್‌, ಡಬಲ್ಸ್‌, ಮಿಶ್ರ ಡಬಲ್ಸ್ ಮತ್ತು ತಂಡ ವಿಭಾಗಗಳಲ್ಲಿ ಭಾಗವಹಿಸುವ ಅವಕಾಶ ನನಗಿದೆ. ಈ ಬಾರಿ ಭಾರತ ಉತ್ತಮ ಆಟಗಾರರನ್ನು ಕಣಕ್ಕೆ ಇಳಿಸುತ್ತಿದ್ದು ಪದಕಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದೆ’ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಶರತ್‌ ಕಮಲ್ ಹೇಳಿದರು.

2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಕೂಟದ‌ಲ್ಲಿ ಎರಡು ಚಿನ್ನ ಗೆದ್ದಿದ್ದ ಅವರು ಒಂದು ದಶಕದಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 100ರ ಒಳಗಿನ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.