ADVERTISEMENT

ಶೆಂಜೆನ್‌ ಚೆಸ್ ಟೂರ್ನಿ: ಹರಿಕೃಷ್ಣ ಸ್‍ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST

ಶೆಂಜೆನ್‌, ಚೀನಾ (ಐಎಎನ್‌ಎಸ್‌): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ. ಹರಿಕೃಷ್ಣ ಗುರುವಾರದಿಂದ ಇಲ್ಲಿ ಆರಂಭವಾಗಲಿರುವ ಶೆಂಜೆನ್‌ ಚೆಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಹರಿಕೃಷ್ಣ ಇತ್ತೀಚೆಗೆ ಹತ್ತರ ಒಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಭಾರತದ ಆಟಗಾರನಿಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲರು.

‘ಕಳೆದ ತಿಂಗಳು ವಿಶ್ವ ರ್‍ಯಾಂಕಿಂಗ್‌ ನಲ್ಲಿ 10ನೇ ಸ್ಥಾನಕ್ಕೆ ಏರಿದ್ದರಿಂದ ವಿಶ್ವಾಸ ಇಮ್ಮಡಿಯಾಗಿದೆ. ಈ ಟೂರ್ನಿ ನನ್ನ ಪಾಲಿಗೆ ಬಹುಮುಖ್ಯವಾದದ್ದು’ ಎಂದು ಹರಿಕೃಷ್ಣ ಹೇಳಿದ್ದಾರೆ.

ADVERTISEMENT

ರೌಂಡ್‌ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತವೆ. ಎಲ್ಲಾ ಆಟಗಾರರು ಪರಸ್ಪರರ ನಡುವೆ ಎರಡು ಪಂದ್ಯ ಆಡಲಿದ್ದಾರೆ. ಗಿರಿ ಹಾಗೂ ಹರಿಕೃಷ್ಣ ಅವ ರೊಂದಿಗೆ ಇಂಗ್ಲೆಂಡ್‌ನ ಮೈಕಲ್ ಆ್ಯಡಮ್ಸ್, ಚೀನಾದ ಡಿಂಗ್‌ ಲಿರೆನ್‌, ಯೂ ಯಂಗೈ, ರಷ್ಯಾದ ಪೀಟರ್‌ ಸ್ವೀಡ್ಲರ್‌ ಕಣದಲ್ಲಿದ್ದಾರೆ. ಏಪ್ರಿಲ್ 3ರವರೆಗೆ ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.