ADVERTISEMENT

ಸಂತೋಷ್‌ ಟ್ರೋಫಿ: ಫೈನಲ್‌ಗೆ ಪಶ್ವಿಮ ಬಂಗಾಳ ಲಗ್ಗೆ

ಪಿಟಿಐ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST

ಬ್ಯಾಂಬೊಲಿಮ್‌, ಗೋವಾ (ಪಿಟಿಐ):  ಪ್ರಬಲ ಪೈಪೋಟಿಯನ್ನು ಎದುರಿಸಿದ ಪಶ್ಚಿಮ ಬಂಗಾಳ ತಂಡ 71ನೇ ಸಂತೋಷ್‌ ಟ್ರೋಫಿ ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ  ಫೈನಲ್ ತಲುಪಿದೆ. ಈ ಟೂರ್ನಿಯ ಇತಿಹಾಸದಲ್ಲಿ ತಂಡವು 44ನೇ ಬಾರಿ ಫೈನಲ್ ತಲುಪಿದೆ.

ಹೆಚ್ಚುವರಿ ಸಮಯ ಹಾಗೂ ಪೆನಾಲ್ಟಿ ಶೂಟೌಟ್‌ನಲ್ಲಿಯೂ ಎರಡೂ ತಂಡಗಳು ಸಮಬಲ ಸಾಧಿಸಿದ್ದ ಕಾರಣ ಪಂದ್ಯದ ಫಲಿತಾಂಶಕ್ಕಾಗಿ ‘ಸಡನ್ ಡೆತ್‌’ ಮೊರೆ ಹೋಗಲಾಯಿತು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ 6–5 ಗೋಲುಗಳಲ್ಲಿ ಮಿಜೋರಾಂ ತಂಡವನ್ನು ಮಣಿಸಿತು.

ಬಂಗಾಳ ತಂಡದ ಮೊಯಿರಂಗತಮ್ ಬಸಂತ್‌ ‘ಸಡನ್‌ ಡೆತ್’ ನಲ್ಲಿ ಗೋಲು ಗಳಿಸಿ ಮಿಂಚಿದರೆ,  ಎದುರಾಳಿ ತಂಡದ ಲಾಲಬೈಕುವಾ ಅವರ ಗೋಲು ಗಳಿಸುವ ಪ್ರಯತ್ನವನ್ನು ಶಂಕರ್ ರಾಯ್‌ ಯಶಸ್ವಿಯಾಗಿ ತಡೆದರು. ಸಂತು ಸಿಂಗ್‌, ಮನವೀರ್‌ ಸಿಂಗ್ , ಶಮದ್ ಅಲಿ ಮಲ್ಲಿಕ್ ಮತ್ತು ಮಮ್ತಾಜ್ ಅಕ್ತರ್‌, ಮನ್‌ತೋಷ್‌ ಶೂಟೌಟ್‌ನಲ್ಲಿ ಬಂಗಾಳ ತಂಡಕ್ಕೆ ಗೋಲು ತಂದುಕೊಟ್ಟರು.

ADVERTISEMENT

ಈಗಾಗಲೇ ಬಂಗಾಳ ತಂಡ 31 ಬಾರಿ ಸಂತೋಷ್ ಟ್ರೋಫಿ ಗೆದ್ದುಕೊಂಡಿರುವ ಇತಿಹಾಸ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.