ADVERTISEMENT

ಸುನಿಲ್‌, ಪ್ರಕಾಶ್‌ಗೆ ಅರ್ಜುನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:12 IST
Last Updated 22 ಆಗಸ್ಟ್ 2017, 19:12 IST
ಎಸ್‌.ವಿ.ಸುನಿಲ್‌, ಪಿ.ಎನ್.ಪ್ರಕಾಶ್‌
ಎಸ್‌.ವಿ.ಸುನಿಲ್‌, ಪಿ.ಎನ್.ಪ್ರಕಾಶ್‌   

ನವದೆಹಲಿ: ಕರ್ನಾಟಕದ ಎಸ್‌.ವಿ.ಸುನಿಲ್‌ (ಹಾಕಿ) ಮತ್ತು ಪಿ.ಎನ್‌.ಪ್ರಕಾಶ್‌ (ಶೂಟಿಂಗ್‌) ಒಳಗೊಂಡಂತೆ ಒಟ್ಟು 17 ಮಂದಿಯನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ಯಾರಾ ಅಥ್ಲೀಟ್‌ ದೇವೇಂದ್ರ ಜಜಾರಿಯಾ ಮತ್ತು ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್‌ ಅವರನ್ನು ರಾಜೀವಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಅಥ್ಲೀಟ್‌ ಭೂಪೇಂದರ್‌ ಸಿಂಗ್‌, ಫುಟ್‌ಬಾಲ್ ಆಟಗಾರ ಸಯ್ಯದ್ ಶಾಹೀದ್ ಹಕೀಮ್‌, ಹಾಕಿ ಆಟಗಾರ ಸುಮರಾಯ್ ಟೇಟೆ ಅವರಿಗೆ ಧ್ಯಾನ್‌ಚಂದ್ ಪ್ರಶಸ್ತಿ ಸಂದಿದೆ.

ಅಥ್ಲೆಟಿಕ್ ಕೋಚ್‌ ದಿವಂಗತ ಡಾ.ಆರ್‌.ಗಾಂಧಿ ಒಳಗೊಂಡಂತೆ ಏಳು ಮಂದಿ ತರಬೇತುದಾರರು ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜೀವಗಾಂಧಿ ಖೇಲ್‌ರತ್ನ ಪ್ರಶಸ್ತಿ ₹ 7.5 ಲಕ್ಷ ನಗದು, ದ್ರೋಣಾಚಾರ್ಯ, ಅರ್ಜುನ ಮತ್ತು ಧ್ಯಾನ್‌ಚಂದ್ ಪ್ರಶಸ್ತಿ ₹ 5 ಲಕ್ಷ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.