ADVERTISEMENT

ಸೂಪರ್‌ ಕಿಂಗ್ಸ್‌ಗೆ 140 ರನ್‌ ಸವಾಲು

ಇಂದು ಸೋತ ತಂಡ ಟೂರ್ನಿಯಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2015, 16:12 IST
Last Updated 22 ಮೇ 2015, 16:12 IST
ಪಂದ್ಯ ಆರಂಭಕ್ಕೂ ಮುನ್ನಾ ಪರಸ್ಪರ ಅಭಿನಂದಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ    – ಪಿಟಿಐ ಚಿತ್ರ
ಪಂದ್ಯ ಆರಂಭಕ್ಕೂ ಮುನ್ನಾ ಪರಸ್ಪರ ಅಭಿನಂದಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ – ಪಿಟಿಐ ಚಿತ್ರ   

ರಾಂಚಿ (ಏಜೆನ್ಸೀಸ್‌): ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಶುಕ್ರವಾರದ ಸೆಮಿಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿದೆ.

ಟಾಸ್‌ ಗೆದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಫೀಲ್ಡಿಂಗ್‌ ಆಯ್ದುಕೊಂಡಿತು. ಕ್ರಿಸ್‌ ಗೇಲ್‌ 41 (23), ವಿರಾಟ್‌ ಕೊಹ್ಲಿ 12 (9), ಎಬಿ ಡಿವಿಲಿಯರ್ಸ್‌ 1 (3),  ಮನ್‌ದೀಪ್‌ ಸಿಂಗ್‌ 4 (7), ದಿನೇಶ್‌ ಕಾರ್ತಿಕ್‌ 28 (26), ಸರ್ಫ್‌ರಾಜ್‌ ಖಾನ್‌ 31 (20), ಡೇವಿಡ್‌ ವೈಸ್‌ 12 (7), ಹರ್ಷಲ್‌ ಪಟೇಲ್‌2 (2) ಮತ್ತು ಮಿಷೆಲ್‌ ಸ್ಟಾರ್ಕ್‌ 1 (1) ರನ್‌ ಕಲೆಹಾಕಿದ್ದಾರೆ.

ತವರಿನಲ್ಲಿ ಮಹೇಂದ್ರ ಸಿಂಗ್‌ ದೋನಿ ಗೆಲುವು ತಮ್ಮದಾಗಿಸಿಕೊಳ್ಳುವ ಕಾತರದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಜಯದ ಮಾಲೆ ಯಾವ ತಂಡದ ಕೊರಳಿಗೇರಲಿದೆ ಎಂಬ ಕುತೂಹಲ ಸದ್ಯದ್ದು. ಇಂದಿನ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.