ADVERTISEMENT

ಹಾಕಿ ಕೂರ್ಗ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಕೂರ್ಗ್‌ ಮತ್ತು ಸಿಟಿಜನ್ಸ್‌ ಇಲೆವನ್‌ ಆಟಗಾರರ ಹಣಾಹಣಿ ಪ್ರಜಾವಾಣಿ ಚಿತ್ರ
ಕೂರ್ಗ್‌ ಮತ್ತು ಸಿಟಿಜನ್ಸ್‌ ಇಲೆವನ್‌ ಆಟಗಾರರ ಹಣಾಹಣಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಾಕಿ ಕೂರ್ಗ್ ತಂಡ ಇಲ್ಲಿ ನಡೆಯುತ್ತಿರುವ ಏಳನೇ ಹಾಕಿ ಇಂಡಿಯಾ ಸಬ್‌ಜೂನಿಯರ್ ’ಬಿ’ ಡಿವಿ ಷನ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಲ್ಲಿ ಮಂಗಳವಾರ ಎರಡನೇ ಗೆಲುವು ದಾಖಲಿಸಿದೆ.

ಹಾಕಿ ಕೂರ್ಗ್‌ 5–0 ಗೋಲುಗಳಲ್ಲಿ ಸಿಟಿಜನ್ಸ್ ಹಾಕಿ ಇಲೆವೆನ್ ತಂಡವನ್ನು ಮಣಿಸಿದೆ. ಕೂರ್ಗ್ ತಂಡದ ಕೆ.ಎಂ. ಯಶ ವಂತ್ (25ನೇ  ನಿ.), ವಿನೇಶ್‌ ಪೂವಯ್ಯ (37, 70ನೇ ನಿ.), ಆಶಿಕ್‌ ಉತ್ತಪ್ಪ (45ನೇ ನಿ.), ಎಮ್‌.ಕೆ. ಚೇತನ್‌ (65ನೇ ನಿ.) ಗೋಲು ದಾಖಲಿಸಿದರು.

ದಿನದ ಇತರ ಪಂದ್ಯಗಳಲ್ಲಿ ನಾಮ ಧಾರಿ ಇಲೆವೆನ್‌ 20–0ರಲ್ಲಿ ಗೋವನ್ಸ್‌ ಹಾಕಿ ಮೇಲೂ, ಮುಂಬೈ ಸಂಸ್ಥೆ 8–1ರಲ್ಲಿ ಪುದುಚೇರಿ ವಿರುದ್ಧವೂ,  ಬಂಗಾಳ 4–1ರಲ್ಲಿ ಹಿಮಾಚಲ ಪ್ರದೇಶ ಎದುರೂ ಗೆಲುವು ದಾಖಲಿಸಿವೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.