ADVERTISEMENT

‘ವಾಲ್ಶ್‌ ಸೇವೆ ಅಗತ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ‘ಆಸ್ಟ್ರೇಲಿಯದ  ಟೆರ್ರಿ ವಾಲ್ಶ್‌ ಅವರನ್ನು ಭಾರತ ಪುರುಷರ ಹಾಕಿ ತಂಡದ  ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದು ವರಿಸುವ ಅಗತ್ಯವಿಲ್ಲ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

‘ಹಾಕಿ ಇಂಡಿಯಾಕ್ಕೆ ವಾಲ್ಶ್‌ ಬೇಕಿಲ್ಲ. ಭಾರತ ಕ್ರೀಡಾ ಪ್ರಾಧಿಕಾರದ ಅನುಮತಿ ಪಡೆದು ತಂಡಕ್ಕೆ ನೂತನ ತರಬೇತುದಾರರನ್ನು  ನೇಮಿಸುತ್ತೇವೆ’ ಎಂದು ಬಾತ್ರಾ ಅವರು ಭಾರತ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಜಿಜಿ ಥಾಮ್ಸನ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.