ADVERTISEMENT

ಬಿಸಿಸಿಐನಲ್ಲಿ ಸುದೀರ್ಘ ಕಾರ್ಯನಿರ್ವಹಿಸಿದ್ದ ತಾಂಬೆ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಸೀತಾರಾಂ ತಾಂಬೆ (ಬಲದಿಂದ ಎರಡನೇಯವರು)
ಸೀತಾರಾಂ ತಾಂಬೆ (ಬಲದಿಂದ ಎರಡನೇಯವರು)   

ಬೆಂಗಳೂರು: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಉದ್ಯೋಗಿ ಸೀತಾರಾಂ ತಾಂಬೆ ನಿವೃತ್ತರಾದರು.

ತಾಂಬೆ ಅವರು ಬಿಸಿಸಿಐನಲ್ಲಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ್ದರು. ತಾಂಬೆ ಅವರು 16ನೇ ವಯಸ್ಸಿನಲ್ಲಿಯೇ ಬಿಸಿಸಿಐಗೆ ಕೆಲಸಕ್ಕೆ ಸೇರಿದ್ದರು.

1989ರಲ್ಲಿ ಸಚಿನ್‌ ತೆಂಡೂಲ್ಕರ್‌ ಭಾರತ ತಂಡಕ್ಕೆ ಆಯ್ಕೆಯಾದಾಗ, ಬಾಂದ್ರಾದಲ್ಲಿದ್ದ ಆವರ ಮನೆಗೆ ತೆರಳಿ ಸಚಿನ್ ತಂದೆಗೆ ಅಧಿಕೃತ ಆಯ್ಕೆ ಪತ್ರ ನೀಡಿದ್ದರು. ಜೊತೆಗೆ ತಂಡಕ್ಕೆ ಆಯ್ಕೆಯಾದ ಎಲ್ಲ ಆಟಗಾರರ ಮನೆಗೆ ಟೆಲಿಗ್ರಾಮ್‌ ಕಳುಹಿಸುವ ಕೆಲಸವನ್ನೂ ನಿಭಾಯಿಸಿದ್ದರು.

ADVERTISEMENT

ಭಾರತದಲ್ಲಿ ಅಂತರರಾಷ್ಟ್ರೀಯ ಸರಣಿಗಳು ನಡೆದಾಗ ಚಾಂಪಿಯನ್ನರಿಗೆ ನೀಡುವ ಟ್ರೋಫಿಯನ್ನು ಫೈನಲ್‌ ಪಂದ್ಯ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ತಾಂಬೆ ನಿರ್ವಹಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದ ಕಚೇರಿಯಲ್ಲಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.