ಬೇಕಾಗುವ ಸಾಮಗ್ರಿ: ಬಾಟಲಿ, ಬೇಯಿಸಿದ ಮೊಟ್ಟೆ, ಕಾಗದ, ಬೆಂಕಿ ಪೆಟ್ಟಿಗೆ.
ವಿಧಾನ
1. ಒಂದು ಕೋಳಿ ಮೊಟ್ಟೆಯನ್ನು 5-10 ನಿಮಿಷ ನೀರಿನಲ್ಲಿ ಬೇಯಿಸಿ.
2. ಬಳಿಕ ಅದನ್ನು ತಂಪು ಮಾಡಿ, ಮೇಲಿನ ಚಿಪ್ಪನ್ನು ತೆಗೆದುಹಾಕಿ.
3. ಚಿತ್ರದಲ್ಲಿ ತೋರಿಸಿರುವಂತೆ ಬಾಟಲಿಯಲ್ಲಿ ಉರಿಯುತ್ತಿರುವ ಕಾಗದವನ್ನು ಹಾಕಿ. ಅನಂತರ ಬಾಟಲಿಯ ಬಾಯಿಯ ಮೇಲೆ (ಮೊಟ್ಟೆಯ ಗಾತ್ರಕ್ಕಿಂತ ಬಾಯಿ ಸ್ವಲ್ಪ ಚಿಕ್ಕದಿರಲಿ) ಮೊಟ್ಟೆಯನ್ನು ಲಂಬವಾಗಿ ಇಟ್ಟು ಸ್ವಲ್ಪ ತಳ್ಳಿ.
ಪ್ರಶ್ನೆ:ಈಗ ಮೊಟ್ಟೆ ಎಲ್ಲಿದೆ? ಯಾಕೆ?
ಉತ್ತರ: ಮೊಟ್ಟೆ ಸಾವಕಾಶವಾಗಿ ಬಾಟಲಿಯಲ್ಲಿ ಬೀಳುತ್ತದೆ. ಏಕೆಂದರೆ ಬಾಟಲಿಯಲ್ಲಿ ಉರಿಯುತ್ತಿರುವ ಕಾಗದವನ್ನು ಹಾಕಿದಾಗ, ಶಾಖ ಹೆಚ್ಚಾಗಿ ಅಲ್ಲಿರುವ ಗಾಳಿ ಹೊರ ಹೋಗುತ್ತದೆ. ಸ್ವಲ್ಪ ಸಮಯದ ನಂತರ ಮೊಟ್ಟೆಯನ್ನು ಬಾಟಲಿಯ ಬಾಯಿಯ ಮೇಲಿಟ್ಟಾಗ ಹಾಗೂ ಬಾಟಲಿ ತಂಪಾದಾಗ ಅದರ ಒಳಗಿನ ಒತ್ತಡ ಕಡಿಮೆಯಾಗಿ, ಹೊರಗಿನ ಒತ್ತಡ ಹೆಚ್ಚಾಗಿ ಮೊಟ್ಟೆಯು ಬಾಟಲಿಯ ಒಳಸೇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.