ADVERTISEMENT

ಮೊಬೈಲ್‌ನಲ್ಲಿ ಡೆಸ್ಕ್‌ಟಾಪ್‌ ಸೈಟ್‌

ದಯಾನಂದ ಎಚ್‌.ಎಚ್‌.
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST
ಮೊಬೈಲ್‌ನಲ್ಲಿ ಡೆಸ್ಕ್‌ಟಾಪ್‌ ಸೈಟ್‌
ಮೊಬೈಲ್‌ನಲ್ಲಿ ಡೆಸ್ಕ್‌ಟಾಪ್‌ ಸೈಟ್‌   

ತಂತ್ರಜ್ಞಾನ ಮುಂದುವರಿದಂತೆ ಅದರ ಬಳಕೆಯ ಆಯ್ಕೆಗಳೂ ಹೆಚ್ಚಾಗುತ್ತವೆ. ಇತ್ತೀಚೆಗೆ ಬಹುತೇಕ ವೆಬ್‌ಸೈಟ್‌ಗಳು ಕಾಮನ್‌ ಲೇಔಟ್‌ನ (ಡೆಸ್ಕ್‌ಟಾಪ್‌ ಸೈಟ್‌) ಜತೆಗೆ ಮೊಬೈಲ್‌ ವರ್ಷನ್‌ ಕೂಡ ಹೊಂದಿರುವುದು ಸಾಮಾನ್ಯವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ಯಾವುದಾದರೊಂದು ವೆಬ್‌ಸೈಟ್‌ ತೆರೆದರೆ ಅದರ ಮೊಬೈಲ್‌ ಸೈಟ್‌ ತೆರೆದುಕೊಳ್ಳುತ್ತದೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲೇ ಡೆಸ್ಕ್‌ಟಾಪ್‌ ಸೈಟ್‌ನ ಲೇಔಟ್‌ ಕೂಡ ತೆರೆಯಬಹುದು.

ಸ್ಮಾರ್ಟ್‌ಫೋನ್‌ನಲ್ಲಿ ಡೆಸ್ಕ್‌ಟಾಪ್‌ ಸೈಟ್‌ ತೆರೆಯುವುದು ತುಂಬಾ ಸರಳ. ಇದಕ್ಕಾಗಿ ಹೆಚ್ಚು ಕಸರತ್ತು ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸರ್‌ ತೆರೆಯಿರಿ. ಮೊಬೈಲ್‌ ಬ್ರೌಸರ್‌ ಲೇಔಟ್‌ನ ಬಲಬದಿಯಲ್ಲಿ ಕಾಣುವ ಕಸ್ಟಮೈಸ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ ಕಾಣುವ ಹಲವು ಆಯ್ಕೆಗಳ ಪೈಕಿ Request desktop siteನ ಮುಂದಿನ ಬಾಕ್ಸ್‌ ಮೇಲೆ ಕ್ಲಿಕ್ಕಿಸಿ.  ಈ ಒಂದು ಕ್ಲಿಕ್‌ ನಿಮ್ಮ ಮೊಬೈಲ್‌ ಅನ್ನು ಡೆಸ್ಕ್‌ಟಾಪ್‌ ಮಾಡಿಬಿಡುತ್ತದೆ!

ಡೆಸ್ಕ್‌ಟಾಪ್‌ ಸೈಟ್‌ ತೆರೆದುಕೊಂಡ ಮೊಬೈಲ್‌ ಪರದೆಯ ಮೇಲೆ ಆ ವೆಬ್‌ಸೈಟ್‌ನ ಕಾಮನ್‌ ಲೇಔಟ್‌ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ಪಿ.ಸಿಯ ಬ್ರೌಸರ್‌ ಮೂಲಕ ಆ ವೆಬ್‌ಸೈಟ್‌ ತೆರೆದಂತೇ ಇರುತ್ತದೆ. ಉದಾಹರಣೆಗೆ, ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೌಸರ್‌ನಲ್ಲಿ prajavani.net ಎಂದು ಟೈಪಿಸಿ ಓಕೆ
ಕೊಟ್ಟರೆ ‘ಪ್ರಜಾವಾಣಿ’ ಅಂತರ್ಜಾಲ ಆವೃತ್ತಿಯ ಮೊಬೈಲ್‌ ಸೈಟ್‌ ತೆರೆದುಕೊಳ್ಳುತ್ತದೆ. ಒಂದು ವೇಳೆ ನೀವು ‘ಪ್ರಜಾವಾಣಿ’ ಡೆಸ್ಕ್‌ಟಾಪ್‌ ಸೈಟ್‌ ನೋಡಬೇಕೆಂದರೆ ಬ್ರೌಸರ್‌ ಕಸ್ಟಮೈಸ್‌ನಲ್ಲಿ Request desktop site ಕ್ಲಿಕ್ಕಿಸಿ ಬಳಿಕ prajavani.net ಎಂದು ಟೈಪಿಸಿದರೆ ‘ಪ್ರಜಾವಾಣಿ’ಯ ಡೆಸ್ಕ್‌ಟಾಪ್‌ ಸೈಟ್‌ ನಿಮ್ಮ ಮೊಬೈಲ್‌ನಲ್ಲಿಇರುತ್ತದೆ.

ಮೊಬೈಲ್‌ ಸೈಟ್‌ ಡೊಮೈನ್‌ ಸಾಮಾನ್ಯವಾಗಿ ‘m’ ಅಕ್ಷರದೊಂದಿಗೆ ಆರಂಭವಾಗುತ್ತದೆ. ‘ಪ್ರಜಾವಾಣಿ’ ಮೊಬೈಲ್‌ ಸೈಟ್‌ನ ಡೊಮೈನ್‌ m.prajavani.net ಎಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ ಬ್ರೌಸರ್‌ನ ಯುಆರ್‌ಎಲ್‌/ ಅಡ್ರೆಸ್‌ ಬಾರ್‌ನಲ್ಲಿ ವೆಬ್‌ಸೈಟ್‌ ಡೊಮೈನ್‌ m ಜತೆಗೆ ಆರಂಭವಾಗಿದ್ದರೆ ಅದು ಆ ವೆಬ್‌ಸೈಟ್‌ನ ಮೊಬೈಲ್‌ ಸೈಟ್‌ ಆಗಿರುತ್ತದೆ.

ಡೆಸ್ಕ್‌ಟಾಪ್‌ ಸೈಟ್‌ನಿಂದ ಮೊಬೈಲ್‌ ಸೈಟ್‌ಗೆ ಬ್ರೌಸರ್‌ ಹೊಂದಿಸಲು ಕಸ್ಟಮೈಸ್‌ ಮೇಲೆ ಕ್ಲಿಕ್‌ ಮಾಡಿ, Request desktop siteನ ಮುಂದಿನ ಬಾಕ್ಸ್‌ ಮೇಲೆ ಮತ್ತೊಮ್ಮೆ ಕ್ಲಿಕ್ಕಿಸಿ. ಈಗ ಮೊಬೈಲ್‌ ಸೈಟ್‌ ತೆರೆದುಕೊಳ್ಳುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.