ADVERTISEMENT

ಭಾರತ್ ಗ್ಯಾಸ್ ಆ್ಯಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:27 IST
Last Updated 17 ಸೆಪ್ಟೆಂಬರ್ 2021, 4:27 IST
ದೇವನಹಳ್ಳಿ ಪಟ್ಟಣದ ಪ್ರಶಾಂತನಗರದ ಎಸ್.ಎಲ್.ಎನ್.ಎಸ್ ಭಾರತ್‌ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಂಬಂಧ ನೂತನ ಆ್ಯಪ್ ಅನ್ನು ಏಜೆನ್ಸಿಯ ವ್ಯವಸ್ಥಾಪಕ ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಕಚೇರಿ ಸಿಬ್ಬಂದಿ ಹಾಜರಿದ್ದರು
ದೇವನಹಳ್ಳಿ ಪಟ್ಟಣದ ಪ್ರಶಾಂತನಗರದ ಎಸ್.ಎಲ್.ಎನ್.ಎಸ್ ಭಾರತ್‌ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಂಬಂಧ ನೂತನ ಆ್ಯಪ್ ಅನ್ನು ಏಜೆನ್ಸಿಯ ವ್ಯವಸ್ಥಾಪಕ ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಕಚೇರಿ ಸಿಬ್ಬಂದಿ ಹಾಜರಿದ್ದರು   

ದೇವನಹಳ್ಳಿ: ‘ವರ್ಚುವಲ್ ಅಸಿಸ್ಟೆಂಟ್ ಮೂಲಕ ಎಲ್‌ಪಿಜಿ ಮತ್ತು ಇಂಧನ ಸೇವೆ ಪಡೆದುಕೊಂಡಿರುವ ಗ್ರಾಹಕರಿಗೆ ಡಿಜಿಟಲ್ ಅನುಭವಕ್ಕೆ ಭಾರತ್ ಗ್ಯಾಸ್ ಏಜೆನ್ಸಿ ಸಜ್ಜಾಗಿದೆ’ ಎಂದು ಭಾರತ್ ಗ್ಯಾಸ್ ದೇವನಹಳ್ಳಿ ಏಜೆನ್ಸಿಯ ವ್ಯವಸ್ಥಾಪಕ ವೇಣುಗೋಪಾಲ್ ತಿಳಿಸಿದರು.

ಪಟ್ಟಣದ ಪ್ರಶಾಂತ ನಗರದ ಎಸ್.ಎಲ್.ಎನ್. ಭಾರತ್‌ ಗ್ಯಾಸ್ ಏಜೆನ್ಸಿಯಲ್ಲಿ ಗುರುವಾರ ಡಿಜಿಟಲ್ ಆ್ಯಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಡಬಲ್ ಬಾಟಲ್ ಸಂಪರ್ಕ ವಿನಂತಿಸುವುದು (ಸಿಂಗಲ್ ಬಾಟಲ್ ಸಂಪರ್ಕ ಗ್ರಾಹಕರಿಗೆ) ತುರ್ತು ದೂರು ಸ್ವೀಕರಿಸುವುದು, ಹತ್ತಿರದ ಇಂಧನ ಕೇಂದ್ರ ಅಥವಾ ಪಂಪ್ ಪತ್ತೆ ಮಾಡುವುದು, ಪಂಪ್‌ಗೆ ದಾರಿ ನಿರ್ದೇಶಿಸುವುದಕ್ಕೆ ಈ ಆ್ಯಪ್‌ ಅನುಕೂಲ ಕಲ್ಪಿಸಲಿದೆ ಎಂದರು.

ADVERTISEMENT

ವಿವಿಧ ಸೇವೆಗಳಿಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ. ಬಿಪಿಸಿಎಲ್‌ನ ಎಲ್ಲಾ ವ್ಯವಹಾರ ಮತ್ತು ಸೇವೆಗಳ ಬಗೆಗಿನ ಎಫ್‌ಎಕ್ಯೂಗಳು ನಿಮ್ಮ ಆಯ್ಕೆಯೊಂದಿಗೆ ವಾಟ್ಸ್‌ಆ್ಯಪ್ ಸಂಖ್ಯೆ 1800-224344 ಮೂಲಕ ಹಲೋ ಎಂದು ಟೈಪ್ ಮಾಡಬೇಕಾಗುತ್ತದೆ. ವೆಬ್‌ಸೈಟ್ ಸಂಖ್ಯೆಗೆ ಚಾಟ್ ಕೂಡ ಮಾಡಬಹುದು ಎಂದು ಮಾಹಿತಿ ನೀಡಿದರು.

ವಾಟ್ಸ್‌ಆ್ಯಪ್ ಮೂಲಕ ಸಿಲಿಂಡರ್ ಬುಕಿಂಗ್ ಹಾಗೂ ಸಿಲಿಂಡರ್ ಸೋರಿಕೆ ಸೇರಿದಂತೆ ಹಲವು ಪ್ರಯೋಜನ ಪಡೆದುಕೊಳ್ಳಲು ಆ್ಯಪ್ ಸಹಕಾರಿಯಾಗಲಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಭಾರತ್ ಗ್ಯಾಸ್ ಕಂಪನಿಯು ವೆಬ್‌ಸೈಟ್ ಮತ್ತು ವಾಟ್ಸ್‌ಆ್ಯಪ್ ಸಂಖ್ಯೆಯೊಂದಿಗೆ ಸಂಯೋಜಿಸಿರುವ ಆಪ್ ಅನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಏಜೆನ್ಸಿಯ ಉಪ ವ್ಯವಸ್ಥಾಪಕ ಮೇಘರಾಜ್, ಸಿಬ್ಬಂದಿಯಾದ ಮುನಿರಾಜು, ರತ್ನಮ್ಮ, ಕಿರಣ್, ನಾರಾಯಣಸ್ವಾಮಿ, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.