ADVERTISEMENT

ಮೂಡುಬಿದಿರೆ: ಜಿ.ವಿ. ಪೈ ಆಸ್ಪತ್ರೆಗೆ ಐಸಿಯು ಘಟಕ

ಅಗ್ಗದ ದರದಲ್ಲಿ ರೋಗಿಗಳಿಗೆ ಸೇವೆ: ಅಭಯಚಂದ್ರ ಜೈನ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:38 IST
Last Updated 10 ಸೆಪ್ಟೆಂಬರ್ 2021, 5:38 IST
ಮೂಡುಬಿದಿರೆಯ ಜಿ.ವಿ. ಪೈ ಆಸ್ಪತ್ರೆಯ ಐಸಿಯು ಘಟಕವನ್ನು ಎಂಸಿಎಸ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಎಂ. ಗುರುವಾರ ಉದ್ಘಾಟಿಸಿದರು.
ಮೂಡುಬಿದಿರೆಯ ಜಿ.ವಿ. ಪೈ ಆಸ್ಪತ್ರೆಯ ಐಸಿಯು ಘಟಕವನ್ನು ಎಂಸಿಎಸ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಎಂ. ಗುರುವಾರ ಉದ್ಘಾಟಿಸಿದರು.   

ಮೂಡುಬಿದಿರೆ: ಇಲ್ಲಿನ ಜಿ.ವಿ. ಪೈ ಸ್ಮಾರಕ ಆಸ್ಪತ್ರೆಯಲ್ಲಿ ನವದೆಹಲಿಯ ಸೋಷಿಯಲ್ ಸರ್ವಿಸ್ ಇನಿಶಿಯೇಟಿವ್ ಒದಗಿಸಿರುವ ತೀವ್ರ ನಿಗಾ ಘಟಕವನ್ನು ಎಂಸಿಎಸ್ ಬ್ಯಾಂಕ್‌ ನಿರ್ದೇಶಕ ಚಂದ್ರಶೇಖರ ಎಂ. ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ವಿ. ಪೈ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಕೆ. ಅಭಯಚಂದ್ರ ಮಾತನಾಡಿ, ‘₹ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಘಟಕದಲ್ಲಿ ಸೆಂಟ್ರಲ್ ಎಸಿ ಸಹಿತ ವೆಂಟಿಲೇಟರ್, ಆಧುನಿಕ ಐಸಿಯು ಸೌಲಭ್ಯಗಳು ಇವೆ. ನಗರದಲ್ಲಿ ಸಿಗುವ ಎಲ್ಲ ಐಸಿಯು ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನೀಡುವುದು ನಮ್ಮ ಉದ್ದೇಶ. ಮೂಡುಬಿದಿರೆಯಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಲು ಟ್ರಸ್ಟ್ ಬದ್ಧವಾಗಿದೆ. ಮುಂದೆ ಡಯಾಲಿಸಿಸ್ ಘಟಕವನ್ನೂ ಸ್ಥಾಪಿಸುವ ಯೋಜನೆ ಇದೆ’ ಎಂದರು.

ಎಸ್.ಎಸ್.ಐ. ಮುಖ್ಯ ಸಂಯೋಜಕ ಪ್ರಕಾಶ್ ಪೈ ಮಾತನಾಡಿದರು.ಕಾರ್ಯದರ್ಶಿ ಡಾ. ಹರೀಶ್ ನಾಯಕ್ ಯೋಜನೆಯ ರೂಪರೇಷೆ ನೀಡಿದರು. ದಾನಿಗಳಾದ ಮಾಲತಿ ಪಾಂಡುರಂಗ ಕಾಮತ್ ಪರವಾಗಿ ಅವರ ಸಹೋದರ ಶಶಿಧರ ನಾಯಕ್ ಮಿತ್ತಬೈಲು, ಉದ್ಯಮಿ ನಂದಕುಮಾರ ಕುಡ್ವ ಪಾಲ್ಗೊಂಡಿದ್ದರು.

ADVERTISEMENT

ಟ್ರಸ್ಟ್ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಸಿ.ಎಚ್. ಅಬ್ದುಲ್ ಗಫೂರ್, ಮನೋಜ್ ಶೆಣೈ, ರಾಮಪ್ರಸಾದ್, ಎಚ್.ಸುರೇಶ ಪ್ರಭು, ಉಮೇಶ ಜಿ. ಪೈ, ಡಾ. ಜಯಗೋಪಾಲ ತೋಳ್ಪಾಡಿ ಇದ್ದರು.

ಟ್ರಸ್ಟ್ ಸದಸ್ಯ ಜೆ.ಜೆ. ಪಿಂಟೊ ನಿರೂಪಿಸಿದರು. ಡಾ. ಮುರಳಿಕೃಷ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.