ADVERTISEMENT

ಅಪಾಯಕಾರಿ ಮಿಡತೆ ಅಲ್ಲ: ಕೃಷಿ ಇಲಾಖೆ

ಒಲಾರ್ಚಸ್ ಮಿಲಿಯಾರಿಸ್ ಸ್ಪಾಟೆಡ್ ಕಾಫಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:26 IST
Last Updated 4 ಜೂನ್ 2020, 17:26 IST
ಬೆಳ್ತಂಗಡಿಯ ಶಿರ್ಲಾಲುನಲ್ಲಿ ಕಂಡು ಬಂದಿದ್ದ ಮಿಡತೆ
ಬೆಳ್ತಂಗಡಿಯ ಶಿರ್ಲಾಲುನಲ್ಲಿ ಕಂಡು ಬಂದಿದ್ದ ಮಿಡತೆ   

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಗ್ರಾಮದಲ್ಲಿ ‘ಒಲಾರ್ಚಸ್ ಮಿಲಿಯಾರಿಸ್ ಸ್ಪಾಟೆಡ್ ಕಾಫಿ’ ಮಿಡತೆ ಕಂಡು ಬಂದಿದ್ದು, ಅವು ಅಪಾಯಕಾರಿಯಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

‘ಈ ಮಿಡತೆಗಳು ಪಶ್ಚಿಮಘಟ್ಟದ ಅಳವಿನಂಚಿನಲ್ಲಿರುವ ಕೀಟ. ಕಾಫಿ, ಬಾಳೆ, ಗೇರು, ಅಡಿಕೆ, ತೆಂಗು, ಏಲಕ್ಕಿ ಹಾಗೂ ಭತ್ತದ ಬೆಳೆಗಳ ಮೇಲೂ ಕಾಣಿಸಬಹುದು. ಉಳುಮೆ ಮೂಲಕ ಮೊಟ್ಟೆ ಹಂತದಲ್ಲಿ ಅವುಗಳನ್ನು ನಿರ್ವಹಿಸಬಹುದು. ಮರಿಗಳನ್ನು ಹಿಡಿದು ಬೇರೆಡೆಗೆ ಬಿಡಬಹುದಾಗಿದೆ’ ಎಂದು ವಿವರಿಸಿದ್ದಾರೆ.

ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌, ನ್ಯಾಷನಲ್ ಬ್ಯುರೊ ಆಫ್ ಅಗ್ರಿಕಲ್ಚರ್ ಇನ್‍ಸೆಕ್ಟ್ ರಿಸೋರ್ಸ್‍ಸ್ ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರು ದೃಢಪಡಿಸಿದ್ದಾರೆ.

ADVERTISEMENT

ಆದರೆ, ಈ ಕೀಟದ ಸಂರಕ್ಷಣೆ ಅವಶ್ಯವಾಗಿದ್ದು, ನಿರ್ವಹಣೆಯನ್ನು ಎಚ್ಚರಿಕೆಯಿಂದ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.