ADVERTISEMENT

ಹಾರಂಗಿ ಜಲಾಶಯ: 'ನೀರಿ' ಸಲಹೆ ಪಡೆಯಲು ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 4:23 IST
Last Updated 10 ಆಗಸ್ಟ್ 2021, 4:23 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಹಾರಂಗಿ ಜಲಾಶಯದ ರಕ್ಷಣೆ ಮತ್ತು ಹೂಳು ತೆಗೆಯುವ ವಿಷಯದಲ್ಲಿ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಅಧ್ಯಯನ ಸಂಸ್ಥೆ (ನೀರಿ) ಸಲಹೆ ಪಡೆಯುವ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೊಡಗು ಜಿಲ್ಲೆಯ ನಂದಾ ಬೆಳ್ಳಿಯಪ್ಪ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಕಾವೇರಿ ನೀರಾವರಿ ನಿಗಮಕ್ಕೆ ಸೂಚನೆ ನೀಡಿತು.

ಹಾರಂಗಿ ಜಲಾಶಯ ಮತ್ತು ನದಿ ದಂಡೆಯಲ್ಲಿನ ಹೂಳು ತೆಗೆಯಲು ಜೂ.14ರಂದು ಟೆಂಡರ್ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಟೆಂಡರ್ ಷರತ್ತುಗಳನ್ನು ಪೂರೈಸಲು ಯಾರೊಬ್ಬರು ಭಾಗಿಯಾಗದ ಕಾರಣ ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ನಿಗಮದ ಪರ ವಕೀಲರು ಪೀಠಕ್ಕೆ ತಿಳಿಸಿದರು. ಈ ಪ್ರಕ್ರಿಯೆಗೂ ಮೊದಲು ನೀರಿ ಸಂಸ್ಥೆಯಿಂದ ಸಲಹೆ ಪಡೆಯುವ ಬಗ್ಗೆ ನಿಲುವು ತಿಳಿಸಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.