ADVERTISEMENT

ಸೆ.26ರಿಂದ ಅ.4: ಪ್ರಜಾವಾಣಿ FB, ಯೂಟ್ಯೂಬ್‌ನಲ್ಲಿ ನವರಾತ್ರಿ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 8:30 IST
Last Updated 23 ಸೆಪ್ಟೆಂಬರ್ 2022, 8:30 IST
ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ (ಎಡ), ಬಸವರಾಜ ಮಹಾಮನಿ (ಬಲ)
ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ (ಎಡ), ಬಸವರಾಜ ಮಹಾಮನಿ (ಬಲ)   

ದಸರಾ - ನವರಾತ್ರಿ ಸಡಗರಕ್ಕೆ ನಾಡು ಸಜ್ಜಾಗಿರುವಂತೆಯೇ ಈ ನವ ದಿನಗಳ ಕಾಲ ಓದುಗರ ಮನವನ್ನು ರಂಜಿಸಲು ಪ್ರಜಾವಾಣಿ ಸಿದ್ಧವಾಗಿದೆ. ಸೆ.26ರ ಸೋಮವಾರದಿಂದ ಪ್ರತಿರಾತ್ರಿ9.30ರಿಂದ 11.00ರವರೆಗೆ ಪ್ರಜಾವಾಣಿ ಯೂಟ್ಯೂಬ್ ಹಾಗೂ ಫೇಸ್‌ಬುಕ್ ತಾಣಗಳಲ್ಲಿ ನಗೆ ಹಬ್ಬ, ಗಾಯನ, ನರ್ತನ, ಯಕ್ಷಗಾನ, ಸಾಹಿತ್ಯ, ಗೋಷ್ಠಿ ವೈವಿಧ್ಯಗಳ ಸಮಾರಾಧನೆ ನಡೆಯಲಿದೆ. ಓದುಗರು ಪ್ರಜಾವಾಣಿಯ ಯೂಟ್ಯೂಬ್ ತಾಣದಲ್ಲಿ (youtube.com/prajavani) ಹಾಗೂ ಫೇಸ್ಬುಕ್‌ ತಾಣದಲ್ಲಿ (fb.com/prajavani.net) ಮೂಲಕ ಈ ಕಾರ್ಯಕ್ರಮಗಳ ಪ್ರಸಾರ ವೀಕ್ಷಿಸಬಹುದು. ಬೆಂಗಳೂರು ಜಯನಗರದ ಕಾಸ್ಮೊಪಾಲಿಟನ್ ಕ್ಲಬ್ ಸಹಯೋಗದೊಂದಿಗೆ, ರಂಗಕರ್ಮಿ, ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ ಅವರ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ಮೂಡಿಬರುತ್ತಿದೆ.

ದಾಂಡಿಯಾ+ಗರ್ಬಾ

ಪ್ರಜಾವಾಣಿ ಅರ್ಪಿಸುವ
ನವರಾತ್ರಿ ಸಾಂಸ್ಕೃತಿಕ ಉತ್ಸವ- 2022
ಸಹಯೋಗ: ಕಾಸ್ಮೋಪಾಲಿಟನ್ ಕ್ಲಬ್, ಜಯನಗರ, ಬೆಂಗಳೂರು

ಯಕ್ಷಗಾನ

ಸೆಪ್ಟೆಂಬರ್ 26ರಿಂದ ಅಕ್ಟೋಬರ್ 4, 2022. ಪ್ರತಿ ಸಂಜೆ 7 ರಿಂದ 8.30

ADVERTISEMENT

ಸೆಪ್ಟೆಂಬರ್ 26 ಸೋಮವಾರ
ಮಹಾ ನಗೆ ಹಬ್ಬ
ಕಾಮಿಡಿ ಕಿಂಗ್ ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಬಸವರಾಜ ಮಹಾಮನಿ
ನಿರ್ವಹಣೆ: ನಾಗರಾಜ್ ಶೆಟ್ಟಿ

ಸೆಪ್ಟೆಂಬರ್ 27 ಮಂಗಳವಾರ
ನವರಾತ್ರಿ ವರ್ಣ ವೈಭವ: ಗರ್ಬಾ ನೃತ್ಯ
ನಂದಿನಿ ಕೆ. ಮೆಹ್ತಾ ಮತ್ತು ಕೆ.ಮುರಳಿ ಮೋಹನ್ ನಿರ್ದೇಶನದ ಸಮೂಹ ನೃತ್ಯ. ನಾದಂ ತಂಡ ಮತ್ತು ಕ್ಲಬ್ ಸದಸ್ಯರಿಂದ
ನಿರ್ವಹಣೆ: ಮಮತಾ ಶ್ರೀನಿವಾಸ್

ಸೆಪ್ಟೆಂಬರ್ 28 ಬುಧವಾರ
ದಾಂಡಿಯಾ - ಗರ್ಬಾ ನೃತ್ಯ
ನರ್ತನ ಅಕಾಡೆಮಿ ಆಫ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ಮತ್ತು ಕ್ಲಬ್ ಸದಸ್ಯರಿಂದ
ನಿರ್ವಹಣೆ: ಸೌಮ್ಯಾ ಪ್ರಭು

ಸೆಪ್ಟೆಂಬರ್ 29 ಗುರುವಾರ
ದಾಂಡಿಯಾ ಧಮಾಲ್
ನಾದಂ ಹಾಗೂ ಕಾಸ್ಮೋಪಾಲಿಟನ್ ಕ್ಲಬ್ ಯುವ ಸದಸ್ಯರಿಂದ
ನಿರ್ವಹಣೆ: ಧರಣಿ ಕಾಂಗೋವಿ

ಸೆಪ್ಟೆಂಬರ್ 30 ಶುಕ್ರವಾರ
ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನ
ಶ್ರೀದೇವಿ ಯಕ್ಷ ಕಲಾ ಸಂಘ ವತಿಯಿಂದ
ನಿರ್ವಹಣೆ: ಡಾ.ಅನುರಾಧಾ ರವಿಶಂಕರ್

ಮುಖ್ಯಮಂತ್ರಿ ಚಂದ್ರು

ಅಕ್ಟೋಬರ್ 01 ಶನಿವಾರ
ನಾನೇ ಕರ್ನಾಟಕದ ಶಾಶ್ವತ ಮುಖ್ಯಮಂತ್ರಿ
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರಿಂದ ಹಾಸ್ಯ ಸಂಜೆ
ನಿರ್ವಹಣೆ: ಶ್ರೀನಿವಾಸ ಜಿ.ಕಪ್ಪಣ್ಣ

ಸುನೀತಾ

ಅಕ್ಟೋಬರ್ 02 ಭಾನುವಾರ
ನವರಾತ್ರಿ ನವರೂಪಿಣಿ
ರಘು ಲೀಲಾ ಸಂಗೀತ ಶಾಲೆ, ಮೈಸೂರು ವತಿಯಿಂದ ಸಮೂಹ ಗಾಯನ
ನಿರ್ದೇಶನ: ಸುನೀತಾ ಚಂದ್ರ ಕುಮಾರ್
ನಿರ್ವಹಣೆ: ನಾಗರಾಜ್ ಕಪನಿ

ಡಾ.ರಮಾ

ಅಕ್ಟೋಬರ್ 03 ಸೋಮವಾರ
ಶ್ರೀ ಚಾಮುಂಡೇಶ್ವರಿ ಪಾಲಯಮಾಂ
ಅಂತರರಾಷ್ಟ್ರೀಯ ಗಾಯಕಿಯರಾದ ಡಾ.ರಮಾ ಪುಸ್ತಕಂ, ದೀಪ್ತಿ ಶ್ರೀನಾಥ್, ಹರಿಣಿ ಶ್ರೀಧರ್, ಸಾಕ್ಷಿ ಜಗದೀಶ್ ನೇತೃತ್ವದ ಗೋಷ್ಠಿ ಗಾಯನ
ವಯಲಿನ್: ಆರ್.ದಯಾಕರ್, ಮೃದಂಗಂ: ವಿದ್ವಾನ್ ಪಿ.ಜನಾರ್ದನ ರಾವ್, ರಿದಂ ಪ್ಯಾಡ್: ವಿದ್ವಾನ್ ಎನ್.ಎಸ್.ಮಂಜುನಾಥ್
ನಿರ್ವಹಣೆ: ರವಿ ಕೋಮಿ ಶೆಟ್ಟಿ

ಕೃಪಾ ಫಡ್ಕೆ

ಅಕ್ಟೋಬರ್ 04 ಮಂಗಳವಾರ

ತ್ರಿಶಕ್ತಿ ವೈಭವ
ಮೈಸೂರಿನ ನೃತ್ಯ ಗಿರಿ ತಂಡದಿಂದ ಸಾಹಿತ್ಯ- ಸಂಗೀತ -ನೃತ್ಯಗಳ ಸಂಗಮ
ನಿರ್ದೇಶನ: ಡಾ.ಕೃಪಾ ಫಡ್ಕೆ
ನಿರ್ವಹಣೆ: ಟಿ.ವಿ.ಶ್ರೀಧರ್

ಕಾರ್ಯಕ್ರಮ ಸಂಯೋಜನೆ: ಶ್ರೀನಿವಾಸ ಜಿ.ಕಪ್ಪಣ್ಣ, ನಿರ್ಮಾಣ: ಎ.ಎನ್.ಕೆ.ರಾಜು, ಕೆ.ಸಿ.ಕೇದಾರನಾಥ್

ದಾಂಡಿಯಾ ಯುವಜನರು
ಮೈಸೂರು ನೃತ್ಯಗಿರಿ ತಂಡ
ರಘುಲೀಲಾ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.