ADVERTISEMENT

ಮಿನುಗು ಮಿಂಚು:ವಜ್ರಲೋಕ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ವಜ್ರಗಳು ತುಂಬಾ ಅಮೂಲ್ಯ ಯಾಕೆ?
ಅವು ಅಪರೂಪಕ್ಕೆ ಸಿಗುವಂಥವು ಹಾಗೂ ಸುಂದರವಾದ ಮುತ್ತುಗಳು. ಕಾಯಿಲೆಗಳನ್ನು, ಸಮಸ್ಯೆಗಳನ್ನು ನೀಗುವ ಗುಣ ಅವಕ್ಕಿದೆ ಎಂಬ ನಂಬಿಕೆಯೂ ಇದೆ.

ವಜ್ರಗಳ ಗಣಿಗಾರಿಕೆ ಮೊದಲು ಆದದ್ದು ಎಲ್ಲಿ?
ಭಾರತದಲ್ಲಿ. 18ನೇ ಶತಮಾನದವರೆಗೆ ಭಾರತವೊಂದೇ ವಜ್ರ ದೊರೆಯುವ ದೇಶ ಎನಿಸಿತ್ತು. ಆಮೇಲೆ 1725ರಲ್ಲಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾದವು. 1870ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಜ್ರ ಇರುವುದು ಗೊತ್ತಾಯಿತು.

ಪ್ರಕೃತಿದತ್ತವಾಗಿ ದೊರೆಯುವ ಅತಿ ಕಠಿಣವಾದ ಖನಿಜ ವಜ್ರ ಎಂಬುದು ನಿಜವೇ?
ಹೌದು. ಮನುಷ್ಯ ಪತ್ತೆ ಮಾಡಿರುವ ವಸ್ತುಗಳಲ್ಲೇ ಅದು ಅತಿ ಕಠಿಣ.

ADVERTISEMENT

ಸಿಂಥೆಟಿಕ್ ವಜ್ರಗಳನ್ನು ಮೊದಲು ಉತ್ಪಾದಿಸಿದ್ದು ಯಾವಾಗ?
1950ರ ದಶಕದಲ್ಲಿ. ಗಣಿಗಾರಿಕೆಯಲ್ಲಿ ತುಂಬಾ ಕಠಿಣವಾದ ವಸ್ತುಗಳನ್ನು ಕೊರೆಯಲು, ಕತ್ತರಿಸಲು ಸಿಂಥೆಟಿಕ್ ವಜ್ರವನ್ನು ಬಳಸುತ್ತಾರೆ. ಅದು ಗಾತ್ರದಲ್ಲಿ ಸಣ್ಣದಾಗಿರುತ್ತದೆ.
ಒಂದು ಕಾಲದಲ್ಲಿ ಗೋಲ್ಕೊಂಡದಲ್ಲಿ ವಜ್ರಗಳು ವಿಪರೀತವಾಗಿದ್ದವು.

ಹದ್ದುಗಳು ಹಾರುವಾಗ ಅವನ್ನು ಉದುರಿಸಿದ್ದೂ ಇದೆ. ಹದ್ದುಗಳ ಗೂಡುಗಳಲ್ಲಿ ವಜ್ರಗಳಿರುತ್ತವೆ ಎಂದು ನಂಬಿ ಜನ ಆ ಗೂಡುಗಳನ್ನು ಕದ್ದ ಕತೆಗಳುಂಟು.

ಪಾಶ್ಚಾತ್ಯ ದೇಶಗಳಲ್ಲಿ ನಿಶ್ಚಿತಾರ್ಥಕ್ಕೆ ವಜ್ರದುಂಗುರ ತೊಡಿಸುವ ಸಂಪ್ರದಾಯ ಯಾಕೆ?
ಆಸ್ಟ್ರಿಯಾದ ರಾಜಕುಮಾರನೊಬ್ಬ ತಾನು ಮದುವೆಯಾಗಲಿರುವ ಬರ್ಗುಂಡಿಯ ಮೇರಿ ಎಂಬಾಕೆಯ ಬೆರಳಿಗೆ ಆಗಸ್ಟ್ 17, 1477ರಲ್ಲಿ ಉಂಗುರ ತೊಡಿಸಿದ. ಅಲ್ಲಿಂದಾಚೆಗೆ ಯುರೋಪ್‌ನಲ್ಲಿ ವಜ್ರದುಂಗುರವನ್ನು ನಿಶ್ಚಿತಾರ್ಥಕ್ಕೆ ತೊಡಿಸುವುದು ಸಂಪ್ರದಾಯದಂತೆ ಆಗಿಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.