ಸೋರೆ ಹಕ್ಕಿ
ಬೋರೆಯ ಹಕ್ಕಿ
ಟಿಟ್ಟಿಭ ಹಕ್ಕಿ
ಕುಟ್ಟುವ ಹಕ್ಕಿ
ಸುವ್ವಿ ಹಕ್ಕಿ
ಸೂರಕ್ಕಿ
ಯಾವುದೆ ಹಕ್ಕಿ
ಹಕ್ಕಿಗಳೆಂದರೆ ನನಗಿಷ್ಟ
ಪುಕ್ಕಗಳಂತು ಬಲು ಇಷ್ಟ!
ನೆಲದಲಿ ಓಡುವ ಹಕ್ಕಿ
ಗಗನದಿ ಹಾರುವ ಹಕ್ಕಿ
ನೀರಲಿ ಈಜುವ ಹಕ್ಕಿ
ಗೂಡಲಿ ಕೂಗುವ ಹಕ್ಕಿ
ಮರದಲಿ ಕೂರುವ ಹಕ್ಕಿ
ಹೊದರಲಿ ತೂರುವ ಹಕ್ಕಿ
ಯಾವುದೆ ಹಕ್ಕಿ
ಹಕ್ಕಿಗಳೆಂದರೆ ನನಗಿಷ್ಟ
ಪುಕ್ಕಗಳಂತು ಬಲು ಇಷ್ಟ!
ಉದ್ದನೆ ಹಕ್ಕಿ
ಗಿಡ್ಡನೆ ಹಕ್ಕಿ
ಸಣ್ಣಯ ಹಕ್ಕಿ
ಬಣ್ಣದ ಹಕ್ಕಿ
ಕೊಕ್ಕಿನ ಹಕ್ಕಿ
ರೆಕ್ಕೆಯ ಹಕ್ಕಿ
ಗಟ್ಟಿಯ ಹಕ್ಕಿ
ಜುಟ್ಟಿನ ಹಕ್ಕಿ
ಮರಿ ಹಕ್ಕಿ
ಬರಿ ಹಕ್ಕಿ
ಯಾವುದೆ ಹಕ್ಕಿ
ಹಕ್ಕಿಗಳೆಂದರೆ ನನಗಿಷ್ಟ
ಪುಕ್ಕಗಳಂತು ಬಲು ಇಷ್ಟ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.