ADVERTISEMENT

ಅಂತರರಾ­ಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಜಾವೇದ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಜಾವೇದ್‌ ಅಖ್ತರ್‌  ಅಂತರರಾ­ಷ್ಟ್ರೀಯ ಕಾಫಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇತ್ತೀಚೆಗೆ ಬ್ರೆಜಿಲ್‌ನ ಬೆಲೊ ಹೊರಿ­ಜೊಂಟೆಯಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ) ಸಭೆಯಲ್ಲಿ ಅಖ್ತರ್ ಅವರನ್ನು ಆಯ್ಕೆ ಮಾಡಲಾಯಿತು.

‘ಐಸಿಒ’ ಸದಸ್ಯತ್ವ ಹೊಂದಿರುವ ದೇಶ ಗಳು ಪ್ರಪಂಚದ ಒಟ್ಟಾರೆ ಕಾಫಿ ಉತ್ಪಾ ದನೆಯಲ್ಲಿ ಶೇ 97ರಷ್ಟು  ಪಾಲು ಹೊಂದಿವೆ. ಭಾರತ ಸಹ ‘ಐಸಿಒ’ ಸದ ಸ್ಯತ್ವ ಹೊಂದಿದ್ದು ವಾರ್ಷಿಕ 52 ಲಕ್ಷ ಟನ್‌ಗಳಷ್ಟು ಕಾಫಿ ಬೆಳೆಯುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.