ಬೆಂಗಳೂರು: ‘ಅಮೆಜಾನ್ ಬಿಸಿನೆಸ್ ಡಾಟ್ ಇನ್’ ಸಗಟು ವಹಿವಾಟಿಗೆ ರಾಜ್ಯದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ 15 ಸಾವಿರ ವರ್ತಕರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಪ್ರಧಾನ ವ್ಯವಸ್ಥಾಪಕ ಕವೀಶ್ ಚಾವ್ಲಾ ಗುರುವಾರ ಮಾಹಿತಿ ನೀಡಿದರು.
‘ಅಮೆಜಾನ್ ಬಿಸಿನೆಸ್ ಡಾಟ್ ಇನ್’ ಸಗಟು ವಹಿವಾಟು ಯಶಸ್ವಿಯಾಗಿ ವರ್ಷ ಪೂರ್ಣಗೊಳಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮೊಬೈಲ್ ಸಗಟು ವಹಿವಾಟು: ಆರಂಭದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರವೇ ಮೊಬೈಲ್ ಸಗಟು ವಹಿವಾಟಿಗೆ ವಹಿವಾಟು ಆರಂಭಿಸಲಾಗಿತ್ತು. ಇದೀಗ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಮಣಿಪಾಲ ಮತ್ತು ಉಡುಪಿಗೂ ವಹಿವಾಟು ವಿಸ್ತರಣೆ ಮಾಡಲಾಗಿದೆ.
‘ಇದರಿಂದ ಕಿರಾಣಿ ಅಂಗಡಿಗಳು, ಫಾರ್ಮಸಿ, ಮೊಬೈಲ್ ಚಿಲ್ಲರೆ ಮಾರಾಟಗಾರರು, ಸಣ್ಣ ಕಚೇರಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ’ ಎದರು.
‘ಒಂದು ವರ್ಷ ಪೂರೈಸಿದ್ದಕ್ಕಾಗಿ ಕೆಲವು ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ₹ 4 ಸಾವಿರ ಬೆಲೆಯ ವಸ್ತುಗಳನ್ನು ಖರೀದಿಸುವ ವರ್ತಕರಿಗೆ (ಕಿರಾಣಿ ಸೇರಿದಂತೆ ಇನ್ನಿತರ ಚಿಲ್ಲರೆ ವ್ಯಾಪಾರಿಗಳಿಗೆ) ಹೆಚ್ಚುವರಿಯಾಗಿ ಶೇ 1 ರಷ್ಟು ವಿನಾಯ್ತಿ ನೀಡಲಾಗುವುದು. ಲ್ಯಾಪ್‌ಟಾಪ್, ಮೊಬೈಲ್, ಗಿಫ್ಟ್ ಕಾರ್ಡ್ ಮತ್ತು ಮಕ್ಕಳ ಆಹಾರಕ್ಕೆ ಈ ವಿನಾಯ್ತಿ ಅನ್ವಯಿಸುವುದಿಲ್ಲ’ ಎಂದರು.
ಆಹಾರ, ಆರೋಗ್ಯ, ತಂಪುಪಾನೀಯ, ಮೊಬೈಲ್ ಫೋನ್ ಸೇರಿದಂತೆ 5 ಸಾವಿರಕ್ಕೂ ಅಧಿಕ ಉತ್ಪನ್ನಗಳು ಲಭ್ಯವಿವೆ. ಬೆಂಗಳೂರು, ಮಂಗಳೂರಿನಲ್ಲಿ ಒಟ್ಟಾರೆ 15 ಸಾವಿರ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಕ್ರೆಡಿಟ್/ಡೆಬಿಟ್ ಕಾರ್ಡ್, ಆರ್‌ಟಿಜಿಎಸ್, ಎನ್‌ಇಎಫ್‌ಟಿ ಮತ್ತು ನೆಟ್‌ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.