ADVERTISEMENT

ಅಶೋಕ್‌ ವೇಮೂರಿ ಐಗೇಟ್‌ ‘ಸಿಇಒ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಮುಂಬೈ(ಪಿಟಿಐ): ಪ್ರಮುಖ ಹೊರಗುತ್ತಿಗೆ ಕಂಪೆನಿ ‘ಐಗೇಟ್‌’ ಅಶೋಕ್‌ ವೇಮೂರಿ ಅವರನ್ನು ಅಧ್ಯಕ್ಷ–ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಿಕೊಂಡಿದೆ. ನೇಮಕ ಆದೇಶ ಸೆ. 16ರಿಂದ ಜಾರಿಗೆ ಬರಲಿದೆ.

ವೇಮೂರಿ ಇತ್ತೀಚೆಗಷ್ಟೇ ‘ಇನ್ಫೊಸಿಸ್‌’ನಿಂದ ಹೊರಬಂದಿದ್ದರು. ಅವರು ಇನ್ಫೊಸಿಸ್‌ ಅಮೆರಿಕ ಘಟಕದಲ್ಲಿ ತಯಾರಿಕೆ ಮತ್ತು ಎಂಜಿನಿಯರಿಂಗ್‌ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದರು. ಶಿಬುಲಾಲ್‌ ನಂತರ ಇನ್ಫೊಸಿಸ್‌ನ ಸಂಭಾವ್ಯ ‘ಸಿಇಒ’ಗಳ ಸಾಲಿನಲ್ಲಿ ವೇಮೂರಿ  ಮುಂಚೂಣಿಯಲ್ಲಿದ್ದರು.

ಭಾರಿ ಶೋಧದ ನಂತರ ಅಶೋಕ್‌ ವೇಮೂರಿ ಅವರನ್ನು ಆಯ್ಕೆ ಮಾಡ ಲಾಗಿದೆ. ಅವರನ್ನು ಕಂಪೆನಿಗೆ ಬರಮಾಡಿಕೊಳ್ಳಲು ಹರ್ಷವೆನಿಸುತ್ತದೆ ಎಂದು ಐಗೇಟ್‌ನ ಸಂಸ್ಥಾಪಕರಲ್ಲೊಬ್ಬರಾದ ಸುನೀಲ್‌ ವಾದ್ವಾನಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.