ADVERTISEMENT

ಆರೋಗ್ಯ ವಿಮೆ: ಶೀಘ್ರ ಎಂಎನ್‌ಪಿ ಜಾರಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 16:25 IST
Last Updated 15 ಫೆಬ್ರುವರಿ 2011, 16:25 IST

ನವದೆಹಲಿ(ಪಿಟಿಐ): ವಿಮೆ ನಿಯಮಾವಳಿಗಳೊಂದಿಗೆ ರಾಜಿಯಾಗದೆ, ತಮಗಿಷ್ಟವಾದ ಆರೋಗ್ಯ ವಿಮೆ ಸಂಸ್ಥೆಗಳಿಗೆ ಪಾಲಿಸಿ ಬದಲಾಯಿಸಿಕೊಳ್ಳಬಹುದಾದ ಸೌಲಭ್ಯವು  ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬರಲಿದೆ.

ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಮಾದರಿಯಲ್ಲಿ ಈ ಆರೋಗ್ಯ ವಿಮಾ ಸಂಸ್ಥೆ ಬದಲಾಯಿಸಿಕೊಳ್ಳುವ ಸೌಲಭ್ಯ ಜಾರಿಗೆ ಬರಲಿದೆ. ಸದ್ಯ  ಆರೋಗ್ಯ ವಿಮಾ ಸಂಸ್ಥೆಯೊಂದರ  ಪಾಲಿಸಿ ಪಡೆದಿರುವ ಮತ್ತು ಅದರ ನಿಯಮಗಳಿಗೆ ಬದ್ಧರಾಗಿರುವ ಗ್ರಾಹಕರು, ತಮಗಿಷ್ಟ ವಾದ ಮತ್ತೊಂದು ಸಂಸ್ಥೆಗೆ ವಿಮೆ ಬದಲಿಸಿಕೊಳ್ಳಬಹುದಾಗಿದೆ.

ಸದ್ಯಕ್ಕೆ ಹಲವು ಕಂಪೆನಿಗಳು ಆರೋಗ್ಯ ವಿಮೆ ಸೌಲಭ್ಯ ನೀಡುತ್ತಿದ್ದು, ಠೇವಣಿ ಹಣ, ಕಂತುಗಳು, ಪರಿಹಾರ ಆಯ್ಕೆಗಳಲ್ಲಿ ವ್ಯತ್ಯಾಸಗಳಿವೆ. ಆರೋಗ್ಯ ವಿಮೆ ಮಾಡಿಸುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದ್ದು, ವಿಮಾ ಕಂಪೆನಿಗಳ  ನಡುವೆ ಸ್ಪರ್ಧೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಸೌಲಭ್ಯ, ಸೇವೆ ಕಲ್ಪಿಸುವ ಸಂಸ್ಥೆಗಳನ್ನು ಆಯ್ದುಕೊಳ್ಳಲು ಹಾಗೂ ಬದಲಿಸಿಕೊಳ್ಳಲು ‘ಎಂಎನ್‌ಪಿ’ ಸೌಲಭ್ಯ ಗ್ರಾಹಕರಿಗೆ  ಮುಕ್ತ ಅವಕಾಶ ಕಲ್ಪಿಸಲಿದೆ ಎಂದು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಆರೋಗ್ಯ ವಿಮೆಯ ಮುಖ್ಯಸ್ಥ ಸಂಜಯ್ ದತ್ತ ತಿಳಿಸಿದ್ದಾರೆ.

ಗ್ರಾಹಕರಿಗೆ ಪ್ರಯೋಜನ: ‘ಎಂಎನ್‌ಪಿ’ ಜಾರಿಯಿಂದ ಆರೋಗ್ಯ ವಿಮಾ ಕಂಪೆನಿಗಳ ನಡುವೆ ಸ್ಪರ್ಧೆ ಹೆಚ್ಚಲಿದೆ. ಗುಣಮಟ್ಟವೂ ಹೆಚ್ಚಲಿದೆ. ಇದರ ನಿಜವಾದ ಅನುಕೂಲ ಗ್ರಾಹಕರಿಗೆ ಲಭಿಸಲಿದೆ ಎಂದು ಭಾರತಿ ಆಕ್ಸಾ ಜನರಲ್ ಇನ್ಶುರೆನ್ಸ್ ಕಂಪೆನಿಯ ವ್ಯವಸ್ಥಾಪಕ  ನಿರ್ದೇಶಕ ಅಮರ್‌ನಾಥ್ ಅನಂತ ನಾರಾಯಣ ಹೇಳಿದ್ದಾರೆ.

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಹೊಸ ‘ಎಂಎನ್‌ಪಿ’ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ಸೂಚಿಸಿದ್ದು, ಆರೋಗ್ಯ ವಿಮೆ  ಸೌಲಭ್ಯ ಪಡೆದುಕೊಳ್ಳುವ ಮೊದಲು ವ್ಯಕ್ತಿಯೊಬ್ಬನಲ್ಲಿ ಇರುವ ಕಾಯಿಲೆಗಳನ್ನು ಕೂಡ, ಗ್ರಾಹಕರು ಆಯ್ದುಕೊಳ್ಳುವ  ಹೊಸ  ವಿಮೆ ಸಂಸ್ಥೆಯ ವ್ಯಾಪ್ತಿಗೆ ತರಬೇಕು ಎಂದು ಹೇಳಿದೆ. ಅಲ್ಲದೆ, ಗ್ರಾಹಕ ಹೊಸದಾಗಿ ಬದಲಾಯಿಸಿಕೊಳ್ಳುವ ವಿಮಾ ಕಂಪೆನಿಗೆ, ಗ್ರಾಹಕನ ಸಂಪೂರ್ಣ ವಿಮೆಯ  ಮಾಹಿತಿಯನ್ನು ವರ್ಗಾಯಿಸುವಂತೆ ಸೂಚಿಸಿದೆ.ವಿಮೆ ನಿಯಮಾವಳಿಗಳೊಂದಿಗೆ ರಾಜಿಯಾಗದೆ, ತಮಗಿಷ್ಟವಾದ ಆರೋಗ್ಯ ವಿಮೆ ಸಂಸ್ಥೆಗಳಿಗೆ ಪಾಲಿಸಿ ಬದಲಾಯಿಸಿಕೊಳ್ಳಬಹುದಾದ ಸೌಲಭ್ಯವು  ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬರಲಿದೆ.

ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಮಾದರಿಯಲ್ಲಿ ಈ ಆರೋಗ್ಯ ವಿಮಾ ಸಂಸ್ಥೆ ಬದಲಾಯಿಸಿಕೊಳ್ಳುವ ಸೌಲಭ್ಯ ಜಾರಿಗೆ ಬರಲಿದೆ. ಸದ್ಯ  ಆರೋಗ್ಯ ವಿಮಾ ಸಂಸ್ಥೆಯೊಂದರ  ಪಾಲಿಸಿ ಪಡೆದಿರುವ ಮತ್ತು ಅದರ ನಿಯಮಗಳಿಗೆ ಬದ್ಧರಾಗಿರುವ ಗ್ರಾಹಕರು, ತಮಗಿಷ್ಟ ವಾದ ಮತ್ತೊಂದು ಸಂಸ್ಥೆಗೆ ವಿಮೆ ಬದಲಿಸಿಕೊಳ್ಳಬಹುದಾಗಿದೆ.

ಸದ್ಯಕ್ಕೆ ಹಲವು ಕಂಪೆನಿಗಳು ಆರೋಗ್ಯ ವಿಮೆ ಸೌಲಭ್ಯ ನೀಡುತ್ತಿದ್ದು, ಠೇವಣಿ ಹಣ, ಕಂತುಗಳು, ಪರಿಹಾರ ಆಯ್ಕೆಗಳಲ್ಲಿ ವ್ಯತ್ಯಾಸಗಳಿವೆ. ಆರೋಗ್ಯ ವಿಮೆ ಮಾಡಿಸುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದ್ದು, ವಿಮಾ ಕಂಪೆನಿಗಳ  ನಡುವೆ ಸ್ಪರ್ಧೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಸೌಲಭ್ಯ, ಸೇವೆ ಕಲ್ಪಿಸುವ ಸಂಸ್ಥೆಗಳನ್ನು ಆಯ್ದುಕೊಳ್ಳಲು ಹಾಗೂ ಬದಲಿಸಿಕೊಳ್ಳಲು ‘ಎಂಎನ್‌ಪಿ’ ಸೌಲಭ್ಯ ಗ್ರಾಹಕರಿಗೆ  ಮುಕ್ತ ಅವಕಾಶ ಕಲ್ಪಿಸಲಿದೆ ಎಂದು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಆರೋಗ್ಯ ವಿಮೆಯ ಮುಖ್ಯಸ್ಥ ಸಂಜಯ್ ದತ್ತ ತಿಳಿಸಿದ್ದಾರೆ.

ಗ್ರಾಹಕರಿಗೆ ಪ್ರಯೋಜನ: ‘ಎಂಎನ್‌ಪಿ’ ಜಾರಿಯಿಂದ ಆರೋಗ್ಯ ವಿಮಾ ಕಂಪೆನಿಗಳ ನಡುವೆ ಸ್ಪರ್ಧೆ ಹೆಚ್ಚಲಿದೆ. ಗುಣಮಟ್ಟವೂ ಹೆಚ್ಚಲಿದೆ. ಇದರ ನಿಜವಾದ ಅನುಕೂಲ ಗ್ರಾಹಕರಿಗೆ ಲಭಿಸಲಿದೆ ಎಂದು ಭಾರತಿ ಆಕ್ಸಾ ಜನರಲ್ ಇನ್ಶುರೆನ್ಸ್ ಕಂಪೆನಿಯ ವ್ಯವಸ್ಥಾಪಕ  ನಿರ್ದೇಶಕ ಅಮರ್‌ನಾಥ್ ಅನಂತ ನಾರಾಯಣ ಹೇಳಿದ್ದಾರೆ.

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಹೊಸ ‘ಎಂಎನ್‌ಪಿ’ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ಸೂಚಿಸಿದ್ದು, ಆರೋಗ್ಯ ವಿಮೆ  ಸೌಲಭ್ಯ ಪಡೆದುಕೊಳ್ಳುವ ಮೊದಲು ವ್ಯಕ್ತಿಯೊಬ್ಬನಲ್ಲಿ ಇರುವ ಕಾಯಿಲೆಗಳನ್ನು ಕೂಡ, ಗ್ರಾಹಕರು ಆಯ್ದುಕೊಳ್ಳುವ  ಹೊಸ  ವಿಮೆ ಸಂಸ್ಥೆಯ ವ್ಯಾಪ್ತಿಗೆ ತರಬೇಕು ಎಂದು ಹೇಳಿದೆ. ಅಲ್ಲದೆ, ಗ್ರಾಹಕ ಹೊಸದಾಗಿ ಬದಲಾಯಿಸಿಕೊಳ್ಳುವ ವಿಮಾ ಕಂಪೆನಿಗೆ, ಗ್ರಾಹಕನ ಸಂಪೂರ್ಣ ವಿಮೆಯ  ಮಾಹಿತಿಯನ್ನು ವರ್ಗಾಯಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.