ಬೆಂಗಳೂರು: ಆರ್ಥಿಕ ಸೇರ್ಪಡೆ ಗಣನೀಯವಾಗಿ ಸುಧಾರಣೆ ಕಾಣುತ್ತಿದ್ದು, ಕ್ರಿಸಿಲ್ ಸೂಚ್ಯಂಕದ ಪ್ರಕಾರ ಠೇವಣಿ ಮತ್ತು ಸಾಲ ನೀಡಿಕೆ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ಆರ್ಬಿಐ, ಕಿರು ಹಣಕಾಸು ಸಂಸ್ಥೆಗಳ ಜಾಲ ಮತ್ತು ವಿಮೆ ಮಾಹಿತಿ ಮಂಡಳಿ ನೀಡಿರುವ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ.
2013 ರಲ್ಲಿ ಆರ್ಥಿಕ ಸೇರ್ಪಡೆ ಪ್ರಮಾಣ ಶೇ 50 ರಷ್ಟು ಇತ್ತು. 2016 ರಲ್ಲಿ ಇದು ಶೇ 58ಕ್ಕೆ ಹೆಚ್ಚಳವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕ್ರಿಸಿಲ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.