ADVERTISEMENT

ಎಂಎಫ್‌: ₹ 67 ಸಾವಿರ ಕೋಟಿ ಸಂಗ್ರಹ

ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಜನಪ್ರಿಯತೆ

ಪಿಟಿಐ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಎಂಎಫ್‌: ₹ 67 ಸಾವಿರ ಕೋಟಿ ಸಂಗ್ರಹ
ಎಂಎಫ್‌: ₹ 67 ಸಾವಿರ ಕೋಟಿ ಸಂಗ್ರಹ   

ನವದೆಹಲಿ: ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ತೊಡಗಿಸಲು ಸಾಮಾನ್ಯ ಹೂಡಿಕೆದಾರರಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಜನಪ್ರಿಯಗೊಳ್ಳುತ್ತಿದ್ದು, 2017–18ರಲ್ಲಿ ಈ ವಿಧಾನದ ಮೂಲಕ ₹ 67,190 ಕೋಟಿ ಹೂಡಿಕೆಯಾಗಿದೆ.

‘ಹೂಡಿಕೆದಾರರಲ್ಲಿ ‘ಸಿಪ್‌’ ಯೋಜನೆಯು ಹೆಚ್ಚು ಜನಪ್ರಿಯವಾಗಲು, ಮ್ಯೂಚುವಲ್‌ ಫಂಡ್ಸ್‌ಗಳ ಷೇರು ಸಂಬಂಧಿತ ಯೋಜನೆಗಳು ಉತ್ತಮ ಸಾಧನೆ ಮಾಡಿರುವುದು ಮತ್ತು ಹೂಡಿಕೆದಾರರಲ್ಲಿ ಅರಿವು ಮೂಡಿಸಲು ಮ್ಯೂಚುವಲ್‌ ಫಂಡ್ಸ್‌ಗಳ ಸಂಸ್ಥೆ (ಎಎಂಎಫ್‌ಐ) ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಕಾರಣವಾಗಿವೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸತೀಶ್‌ ಮೆನನ್‌ ಹೇಳಿದ್ದಾರೆ.

ಮ್ಯೂಚುವಲ್‌ ಫಂಡ್ಸ್‌ಗಳ ವಾರ್ಷಿಕ ಶುಲ್ಕವನ್ನು ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಕಡಿಮೆ ಮಾಡಿರುವುದು ಮತ್ತು ಷೇರುಪೇಟೆಗೆ ಮರಳಿರುವ ಸ್ಥಿರತೆಯು, ಹೂಡಿಕೆದಾರರ ಪಾಲಿಗೆ ‘ಸಿಪ್‌’ ಹೆಚ್ಚು ಆಕರ್ಷಕವಾಗಿರಲು ಕಾರಣವಾಗಿದೆ.

ADVERTISEMENT

ಹೂಡಿಕೆದಾರರು ಸಣ್ಣ, ಸಣ್ಣ ಮೊತ್ತಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡಲು ‘ಸಿಪ್‌’ ನೆರವಾಗುತ್ತಿದೆ. ಪ್ರತಿ ವಾರ, ತಿಂಗಳು ಮತ್ತು ಮೂರು ತಿಂಗಳಿಗೊಮ್ಮೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು.

ಬ್ಯಾಂಕ್‌ ಗ್ರಾಹಕರು ‍‍ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತವನ್ನು ಠೇವಣಿ(ಆರ್‌.ಡಿ) ಇರಿಸಿದಂತೆ, ಈ ‘ಸಿಪ್‌’ ಕಾರ್ಯನಿರ್ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.