ADVERTISEMENT

ಎಎಂಎಸ್‌ ಹೊಸ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 19:36 IST
Last Updated 26 ಡಿಸೆಂಬರ್ 2017, 19:36 IST
ಹೊಸ ಘಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ರಾಮದಾಸ್‌
ಹೊಸ ಘಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ರಾಮದಾಸ್‌   

ಬೆಂಗಳೂರು: ಮಷಿನ್‌ಟೂಲ್ಸ್‌ ತಯಾರಿಕಾ ಸಂಸ್ಥೆ  ಏಸ್ ಮ್ಯಾನುಫ್ಯಾಕ್ಚರಿಂಗ್‌ ಸಿಸ್ಟಮ್ಸ್‌ (ಎಎಂಎಸ್‌) ಪೀಣ್ಯದಲ್ಲಿ ಆರಂಭಿಸಿರುವ ಹೊಸ ತಯಾರಿಕಾ ಘಟಕವನ್ನು ಈಚೆಗೆ ಉದ್ಘಾಟಿಸಲಾಯಿತು.

ಈ ಘಟಕದ ತಯಾರಿಕಾ ಸಾಮರ್ಥ್ಯವನ್ನು ವಾರ್ಷಿಕ 10,000ದಿಂದ 30,000ಕ್ಕೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಹೇಳಿದೆ. ಈ ಘಟಕದಲ್ಲಿ ಈ ಹಿಂದೆ ವಾರ್ಷಿಕ 1,200 ಯಂತ್ರೋಪಕರಣಗಳನ್ನು ತಯಾರಿಸಲಾಗುತ್ತಿತ್ತು.

ಘಟಕದ ತಯಾರಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ರಾಮದಾಸ್‌, ಕಳೆದ ವರ್ಷ ಹೊಸ ಘಟಕ ಸ್ಥಾಪಿಸಿ ವಾರ್ಷಿಕ 1,800 ಯಂತ್ರೋಪಕರಣಗಳನ್ನು ತಯಾರಿಸಲು ಕ್ರಮ ಕೈಗೊಂಡಿದ್ದರು. ಈಗ ಅದನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ರಾಹಕರಿಗೆ ಉತ್ತಮ ಗುಣಮಟ್ಟದ ಯಂತ್ರೋಪಕರಣಗಳನ್ನು ಪೂರೈಸುವುದು ಸಂಸ್ಥೆಯ ಗುರಿಯಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.