ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಇತ್ತೀಚೆಗೆ ಇಲ್ಲಿ ಮಹೀಂದ್ರಾ ರೇವಾ ಎಲೆಕ್ಟ್ರಿಕ್ ವೆಹಿಕ ಲ್ಸ್ ಜತೆ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದ ಅನ್ವಯ ರೇವಾ ವಾಹನ ಖರೀದಿಸುವವರಿಗೆ `ಎಸ್ಬಿಐ~ ಹಣಕಾಸಿನ ನೆರವು ಒದಗಿಸಲಿದೆ. ದೇಶದಾದ್ಯಂತ ಇರುವ 13,800 `ಎಸ್ಬಿಐ~ ಶಾಖೆಗಳಲ್ಲಿ ಗ್ರಾಹಕರು ಈ ಸೌಲಭ್ಯ ಪಡೆದುಕೊಳ್ಳಬಹುದು. `ಎಸ್ಬಿಐ~ ಚೀಫ್ ಜನರಲ್ ಮ್ಯಾನೇಜರ್ (ಮುಂಬೈ)ರಾಜೀವ್ ನಂದನ್ ಮೆಹ್ರಾ ಮತ್ತು ರೇವಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಚಂದ್ರಮೌಳಿ ಒಪ್ಪಂದಕ್ಕೆ ಸಹಿ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.