ADVERTISEMENT

ಕನ್ನಡದಲ್ಲಿ ರೈಲ್ವೆ ಟಿಕೆಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 20:18 IST
Last Updated 1 ಮಾರ್ಚ್ 2018, 20:18 IST
ಇಂಗ್ಲಿಷ್, ಹಿಂದಿಯೊಂದಿಗೆ ಕನ್ನಡದಲ್ಲಿಯೂ ಮುದ್ರಿಸಲಾದ ಟಿಕೆಟ್
ಇಂಗ್ಲಿಷ್, ಹಿಂದಿಯೊಂದಿಗೆ ಕನ್ನಡದಲ್ಲಿಯೂ ಮುದ್ರಿಸಲಾದ ಟಿಕೆಟ್   

ಹುಬ್ಬಳ್ಳಿ: ನೈರುತ್ಯ ರೈಲ್ವೆಯು, ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳ (ಎಟಿವಿಎಂ) ಮೂಲಕ ಮುದ್ರಿತವಾಗುವ ದ್ವಿತೀಯ ದರ್ಜೆಯ ಟಿಕೆಟ್‌ಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ಆರಂಭಿಸಿದೆ.

ಭಾರತೀಯ ರೈಲ್ವೆಯ ಎಲ್ಲಾ 9,094 ನಿಲ್ದಾಣಗಳ ಹೆಸರನ್ನು ಕನ್ನಡ ಭಾಷೆಯಲ್ಲಿ ಸಾಫ್ಟ್‌ವೇರ್‌ಗೆ ಸೇರಿಸಲಾಗಿದೆ. ಈಗ ಎ.ಟಿ.ವಿ.ಎಂಗಳ ಮೂಲಕ ವಿತರಿಸಲಾಗುವ ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ಖರೀದಿಸಿ ಮುದ್ರಿಸಲಾದ ಟಿಕೆಟ್‌ಗಳಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಇರಲಿವೆ.

ಈ ಟಿಕೆಟ್‌ಗಳಲ್ಲಿ ಪ್ರಯಾಣ ಯಾವ ನಿಲ್ದಾಣದಿಂದ ಯಾವ ನಿಲ್ದಾಣದವರೆಗೆ, ಪ್ರಯಾಣದ ದರ್ಜೆ ಮತ್ತು ರೈಲಿನ ವಿಧ (ಪ್ಯಾಸೆಂಜರ್/ಎಕ್ಸ್‌ಪ್ರೆಸ್)ಗಳ ವಿವರಗಳು ಮುದ್ರಿತವಾಗಿರುತ್ತವೆ ಎಂದು ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ರೈಲು ನಿಲ್ದಾಣಗಳಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಹಂತ ಹಂತವಾಗಿ ಇತರ ನಿಲ್ದಾಣಗಳಲ್ಲಿಯೂ ಕೊಡಲಾಗುವುದು ಎಂದು ನೈರುತ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.