ADVERTISEMENT

ಕಾಫಿ ರಫ್ತು ವಹಿವಾಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ (ಪಿಟಿಐ): 2011ನೇ ಸಾಲಿನಲ್ಲಿ ದೇಶದ ಕಾಫಿ ರಫ್ತು ಶೇ 22ರಷ್ಟು ಹೆಚ್ಚಿದ್ದು,  ಅಂದಾಜಿಸಲಾಗಿರುವ 3.50ಲಕ್ಷ ಟನ್ ವಾರ್ಷಿಕ ಗುರಿಗೆ ಸಮೀಪದಲ್ಲಿದೆ ಎಂದು ಕಾಫಿ ಮಂಡಳಿ ಹೇಳಿದೆ.

2010ರಲ್ಲಿ 2.88 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. ಡಿಸೆಂಬರ್ 29ರವರೆಗಿನ ಅಂಕಿ ಅಂಶಗಳ ಪ್ರಕಾರ ರೂ 4,859 ಕೋಟಿ ಮೊತ್ತದ  3.46 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿದೆ. ಈ ಅವಧಿಯಲ್ಲಿ ಹಡಗುಗಳ ಮೂಲಕ ನಡೆಯುವ ಕಾಫಿ ರಫ್ತು ವಹಿವಾಟು ಶೇ 50ರಷ್ಟು ಹೆಚ್ಚಿದ್ದು, 2.94 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.96 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾಫಿ ರಫ್ತು ಶೇ 14ರಷ್ಟು ಇಳಿಕೆ ದಾಖಲಿಸುವ ಸಾಧ್ಯತೆ ಇದ್ದು, 2.40 ಲಕ್ಷ ಟನ್‌ಗಳಿಗೆ ಕುಸಿಯಲಿದೆ  ಎಂದು ಕಾಫಿ ಮಂಡಳಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.