ADVERTISEMENT

ಕಾಫಿ ರಫ್ತು ಶೇ4.45 ಇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST
ಕಾಫಿ ರಫ್ತು ಶೇ4.45 ಇಳಿಕೆ
ಕಾಫಿ ರಫ್ತು ಶೇ4.45 ಇಳಿಕೆ   

ನವದೆಹಲಿ(ಪಿಟಿಐ): ಭಾರತದ ಕಾಫಿ ರಫ್ತು ಈ ವರ್ಷದ ಜನವರಿ-ಜೂನ್ ಅವಧಿಯಲ್ಲಿ ಶೇ 4.45ರಷ್ಟು ಕುಸಿದಿದೆ.

ವರ್ಷದ ಮೊದಲ ಆರು ತಿಂಗಳಲ್ಲಿ 1,91,055 ಟನ್(ರೂ2,818.35 ಕೋಟಿ) ಕಾಫಿ ರಫ್ತಾಗಿದೆ. 2012ರಲ್ಲಿ ಇದೇ ಅವಧಿಯಲ್ಲಿ 1,99,969 ಟನ್(ರೂ2,955.35 ಕೋಟಿ)ಕಾಫಿ ರಫ್ತಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಧಾರಣೆ ಕಡಿಮೆ ಆಗಿದ್ದುದೇ ರಫ್ತು ಇಳಿಮುಖವಾಗಲು ಕಾರಣ ಎಂದು ಕಾಫಿ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಅರೇಬಿಕಾ ಕಾಫಿ ಶೇ 4ರಷ್ಟು, ಇನ್‌ಸ್ಟಂಟ್ ಕಾಫಿ ರಫ್ತು ಶೇ 32ರಷ್ಟು  ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.