ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಪ್ರಾರಂಭಿಸಿರುವ ನೂತನ ವೆಬ್ ತಾಣವು (www.kassia.com) ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಕೈಗಾರಿಕೆ ಸಂಸ್ಥೆಗಳಿಗೆ, ಕಿರು ಉದ್ಯಮಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ನೆರವು ನೀಡಲಿದೆ ಎಂದು ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ `ಕಾಸಿಯಾ~ದ ನೂತನ ವೆಬ್ ತಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾಗತಿಕ ಮಾರುಕಟ್ಟೆಯ ದೊಡ್ಡ ಸ್ಪರ್ಧಿಗಳ ಜತೆಗೆ, ಸಣ್ಣ ಕೈಗಾರಿಕೆಗಳು ಸ್ಪರ್ಧಿಸಲು ಈ ಅಂತರಜಾಲ ತಾಣ ನೆರವಿನ ಸೇತುವೆಯಾಗಲಿದೆ ಎಂದರು.
`ತಯಾರಿಕೆ ಸರಕು ಆಧರಿಸಿ ಸಣ್ಣ ಕೈಗಾರಿಕೆಗಳ ಪಟ್ಟಿಯನ್ನು ವರ್ಗೀಕರಿಸಲಾಗಿದ್ದು, ಒಟ್ಟಾರೆ ವೆಬ್ ತಾಣವನ್ನು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಈ ಮೂಲಕ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಆನ್‌ಲೈನ್ ಸೌಲಭ್ಯ ಲಭಿಸಿದೆ~ ಎಂದು `ಕಾಸಿಯಾ~ ಅಧ್ಯಕ್ಷ ಪ್ರಕಾಶ್ ಎನ್. ರಾಯ್ಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.