ADVERTISEMENT

ಕೀರ್ತಿಲಾಲ್‌ನಿಂದ ಅಗ್ಗದ ಬೆಲೆಯ ವಜ್ರದ ನೆಕ್ಲೇಸ್‌

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 19:30 IST
Last Updated 18 ಆಗಸ್ಟ್ 2016, 19:30 IST
ವಜ್ರ ಮತ್ತು ಚಿನ್ನಾಭರಣ ತಯಾರಿಕಾ ಸಂಸ್ಥೆ ಕೀರ್ತಿಲಾಲ್‌ನ ವಜ್ರದ ನೆಕ್ಲೇಸ್‌ಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು
ವಜ್ರ ಮತ್ತು ಚಿನ್ನಾಭರಣ ತಯಾರಿಕಾ ಸಂಸ್ಥೆ ಕೀರ್ತಿಲಾಲ್‌ನ ವಜ್ರದ ನೆಕ್ಲೇಸ್‌ಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು   

ಬೆಂಗಳೂರು:  ವಜ್ರ ಮತ್ತು ಚಿನ್ನದ ಆಭರಣ ತಯಾರಿಕಾ ಸಂಸ್ಥೆ  ಕೀರ್ತಿಲಾಲ್‌ ತನ್ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಸಾಂಪ್ರದಾಯಿಕ ವಿನ್ಯಾಸದ ಹಾಗೂ ವಿಭಿನ್ನ ಶೈಲಿಯ ಆಭರಣ ಪ್ರದರ್ಶನ ಏರ್ಪಡಿಸಿತ್ತು.

ಹೊಸ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ವಜ್ರದ ನೆಕ್ಸೇಸ್‌ಗಳನ್ನು ಧರಿಸಿದ್ದ ರೂಪದರ್ಶಿಯರು ಆಭರಣ ಪ್ರದರ್ಶಿಸಿದರು.
‘ವಜ್ರದ ಆಭರಣಕ್ಕಿಂತ ಚಿನ್ನಾಭರಣ ದರ ಅಗ್ಗ ಎಂಬ ಗ್ರಹಿಕೆ ಗ್ರಾಹಕರಲ್ಲಿದೆ. ಆದರೆ, ಚಿನ್ನದ ನೆಕ್ಲೇಸ್‌ಗಿಂತ ಕಡಿಮೆ ಬೆಲೆಯಲ್ಲಿ ವಜ್ರದ ನೆಕ್ಲೇಸ್‌ಗಳನ್ನು ಖರೀದಿಸಬಹುದು.

ನಮ್ಮ ಸಂಸ್ಥೆಯ ಮಳಿಗೆಗಳಲ್ಲಿ  ₹ 77 ಸಾವಿರ ಆರಂಭಿಕ ಬೆಲೆಯಲ್ಲಿ ವಜ್ರದ  ನೆಕ್ಲೇಸ್‌ಗಳು ಲಭ್ಯ ಇವೆ. ಸಂಸ್ಥೆಯ ಆಭರಣಗಳನ್ನು ಆನ್‌ಲೈನ್‌ ಮೂಲಕ  ಮಾರಾಟ ನಡೆಸಲು  ಚಿಂತನೆ ನಡೆಸಲಾಗುತ್ತಿದೆ’ ಎಂದು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅರುಣ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.