ADVERTISEMENT

ಕೆನರಾ ಬ್ಯಾಂಕ್ ನಿವ್ವಳ ಲಾಭ ರೂ 792 ಕೋಟಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಬೆಂಗಳೂರು: ಕೆನರಾ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿರೂ792 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ, ವರ್ಷದಿಂದ ವರ್ಷಕ್ಕೆ ಲಾಭ ಗಳಿಕೆಯಲ್ಲಿ ಶೇ 2.2ರಷ್ಟು ಅಲ್ಪ ಪ್ರಮಾಣದ ಪ್ರಗತಿಯಾಗಿದೆ.

2012-13ನೇ ಹಣಕಾಸು ವರ್ಷದ ಎಪ್ರಿಲ್-ಜೂನ್ ಅವಧಿಯಲ್ಲಿ ಬ್ಯಾಂಕ್ರೂ775 ಕೋಟಿ ಲಾಭ ಗಳಿಸಿತ್ತು.ಸಾಲಗಳ ಮರು ನವೀಕರಣ ಮತ್ತು ವಸೂಲಾಗದ ಸಾಲಗಳ ಹೊಂದಾಣಿಕೆ ಬಾಬ್ತು ಈ ಬಾರಿರೂ1106 ಕೋಟಿಗೆ  (ಕಳೆದ ಬಾರಿರೂ619 ಕೋಟಿ) ಹೆಚ್ಚಿದ್ದರಿಂದ ನಿವ್ವಳ ಲಾಭ ಗಳಿಕೆಯಲ್ಲಿ ಹೆಚ್ಚಿನ ಸಾಧನೆ ತೋರಲು ಸಾಧ್ಯವಾಗಲಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಕೆ.ದುಬೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2013-14ನೇ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ ದೊಡ್ಡ ಮೊತ್ತದ ಠೇವಣಿ ಪ್ರಮಾಣ(1 ಲಕ್ಷ ಕೋಟಿಗೂ ಅಧಿಕ) ಕಡಿಮೆ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಬಡ್ಡಿ ಪಾವತಿ ಹೊರೆಯನ್ನು ತಕ್ಕಮಟ್ಟಿಗೆ ತಗ್ಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಾಲಗಳ ಮೂಲದ ಬಡ್ಡಿ ವರಮಾನರೂ6449.84 ಕೋಟಿಗೆ (ಶೇ 4.8) ಹೆಚ್ಚಿದೆ. ಆದರೆ, ನಿವ್ವಳ ಬಡ್ಡಿ ಲಾಭ  (ಎನ್‌ಐಎಂ) ಶೇ 2.21ಕ್ಕೆ ಬಂದಿದೆ.

ನಿವ್ವಳ ಎನ್‌ಪಿಎ ಹೆಚ್ಚಳ
ಉಕ್ಕು, ಜವಳಿ, ವಿಮಾನಯಾನ ಸೇರಿದಂತೆ ಕಾರ್ಪೊರೇಟ್ ವಲಯದ ಬೃಹತ್ ಕಂಪೆನಿಗಳಿಂದಲೇ ಭಾರಿ ಸಾಲ ವಸೂಲಿ ಆಗಬೇಕಿದೆ. ಇದು 2012ರ 1ನೇ ತ್ರೈಮಾಸಿಕರೂ1090 ಕೋಟಿಯಷ್ಟಿದ್ದುದು ಈ ಬಾರಿರೂ2141 ಕೋಟಿಗೆ ಹೆಚ್ಚಿದೆ. ಕೃಷಿ ಕ್ಷೇತ್ರದ ಸಾಲವೂರೂ1000 ಕೋಟಿಯಷ್ಟು  ವಸೂಲಿ ಆಗಬೇಕಿದೆ. ಒಟ್ಟುರೂ7329 ಕೋಟಿ ಸಾಲ ವಸೂಲಿ ಬಾಕಿಯಾಯಿತು. ಹಾಗಾಗಿ    ವಸೂಲಾಗದ ನಿವ್ವಳ ಸಾಲಗಳ ಪ್ರಮಾಣಕಳೆದ ವರ್ಷರೂ3755.61 ಕೋಟಿಯಷ್ಟು(ಶೇ 1.66) ಇದ್ದುದು, ಈ ಬಾರಿರೂ6209.17 ಕೋಟಿಗೆ (ಶೇ 2.48) ಹೆಚ್ಚಿದೆ ಎಂದರು.

ಇದೇ ವೇಳೆ, ಜೂನ್ 30ರ ವೇಳೆಗೆ ಬ್ಯಾಂಕ್ರೂ3.82 ಲಕ್ಷ ಕೋಟಿ ಠೇವಣಿ,ರೂ2.50 ಲಕ್ಷ ಕೋಟಿ ಸಾಲ ವಿತರಣೆಯೊಂದಿಗೆ ಒಟ್ಟುರೂ6.32 ಲಕ್ಷ ಕೋಟಿ ವಹಿವಾಟು ನಡೆಸಿ ಶೇ 12.8ರ ಹೆಚ್ಚಳ ಸಾಧಿಸಿದೆ ಎಂದರು.ಕಳೆದೊಂದು ವರ್ಷದಲ್ಲಿ 161 ಹೊಸ ಶಾಖೆ, 647 ಎಟಿಎಂ ಆರಂಭಿಸಲಾಗಿದೆ. ಸದ್ಯ 3770 ಶಾಖೆ, 3754 ಎಟಿಎಂಗಳಿವೆ. ಶಾಖೆಗಳನ್ನು 5000ಕ್ಕೂ ಎಟಿಎಂಗಳನ್ನು 10,000ಕ್ಕೂ ಹೆಚ್ಚಿಸುವ ಗುರಿ ಇದೆ ಎಂದರು.
`ಅಮಾನತ್ ಬ್ಯಾಂಕ್ ಸ್ವಾಧೀನ ಯತ್ನ ನಡೆದಿದೆ.  ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಒಪ್ಪಿಗೆ ಬೇಕಿದೆ' ಎಂದು ದುಬೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT