ADVERTISEMENT

‘ಖಾಸಗಿ ಬ್ಯಾಂಕ್‌ ರಾಷ್ಟ್ರೀಕರಣಗೊಳಿಸಿ’

ಪಿಟಿಐ
Published 13 ಏಪ್ರಿಲ್ 2018, 19:29 IST
Last Updated 13 ಏಪ್ರಿಲ್ 2018, 19:29 IST

ನವದೆಹಲಿ: ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಉದ್ಯೋಗಿಗಳ ಒಕ್ಕೂಟಗಳು
ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಖಾಸಗಿ ಬ್ಯಾಂಕ್‌ಗಳ ವಿರುದ್ಧ ಕಾರ್ಪೊರೇಟ್‌ ಆಡಳಿತ ವೈಫಲ್ಯ ಮತ್ತು ಮಾಹಿತಿ ಮುಚ್ಚಿಡುವ ಆರೋಪಗಳು ಹೆಚ್ಚಾಗುತ್ತಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಷ್ಟ್ರೀಕರಣ ಗೊಳಿಸುವಂತೆ ಬೇಡಿಕೆ ಇಟ್ಟಿವೆ.

‘ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಧ್ಯಸ್ಥಿಕೆ ವಹಿಸಿ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿವೆ. ‘ಉತ್ತಮ ಆಡಳಿತಕ್ಕೆ ತಾನು ಮಾದರಿ ಎಂದು ಐಸಿಐಸಿಐ ಬ್ಯಾಂಕ್‌ ಬಿಂಬಿಸಿಕೊಳ್ಳುತ್ತಿತ್ತು. ಇದೀಗ ಅದರ ಸ್ಥಿತಿ ಏನಾಗಿದೆ’ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ವೆಂಕಟಾಚಲಂ ಪ್ರಶ್ನಿಸಿದ್ದಾರೆ.

ADVERTISEMENT

* ಬ್ಯಾಂಕಿಂಗ್‌ ವಲಯದಲ್ಲಿ ದಕ್ಷತೆಗೆ ಛಾಂಪಿಯನ್‌ ಎನಿಸಿಕೊಂಡಿರುವವರ ಸತ್ಯ ಏನು ಎನ್ನುವುದು ಇದೀಗ ಎಲ್ಲರಿಗೂ

–ಸಿ.ಎಚ್‌. ವೆಂಕಟಾಚಲಂ, ಎಐಬಿಇಎನ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.