ADVERTISEMENT

`ಜಿಟಿಎಲ್'ಗೆ ರೂ1ಕೋಟಿ ದಂಡ ವಿಧಿಸಿದ `ಸೆಬಿ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಮುಂಬೈ(ಪಿಟಿಐ): ಕಂಪೆನಿಯಲ್ಲಿ ಎಲ್ಲ ಸಂಸ್ಥಾಪಕರುಗಳು ಮತ್ತು ಸಂಸ್ಥಾಪಕರ ಸಮೂಹದ ಷೇರುಪಾಲು ಎಷ್ಟಿದೆ ಎಂಬ ವಿವರ ಸೇರಿದಂತೆ ಅಗತ್ಯ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ `ಗೋಲ್ಡನ್ ಟೊಬ್ಯಾಕೊ ಲಿ.'(ಜಿಟಿಎಲ್)ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ರೂ1 ಕೋಟಿ ದಂಡ ವಿಧಿಸಿದೆ.

ಷೇರು ವಿನಿಮಯ ಕೇಂದ್ರಗಳ ವಹಿವಾಟು ಪಟ್ಟಿಗೆ ಸೇರುವ ಒಪ್ಪಂದ ಹಾಗೂ ವಂಚನೆ ತಡೆ-ನ್ಯಾಯಯುತವಲ್ಲದ ವಾಣಿಜ್ಯ ಕ್ರಮಗಳ ನಿರ್ಬಂಧ ಕಾಯ್ದೆ ಅನ್ವಯ ಅಗತ್ಯವಾದ ಮಾಹಿತಿಗಳನ್ನು `ಜಿಟಿಎಲ್' ಒದಗಿಸಬೇಕಿತ್ತು. ಆದರೆ ಸ್ಪಷ್ಟ ಮಾಹಿತಿಗಳನ್ನು ಒದಗಿಸದ ಕಂಪೆನಿ ಎರಡೂ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ `ಸೆಬಿ' ದಂಡ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.