ADVERTISEMENT

ದೂರಸಂಪರ್ಕ: ಹೊಸ ಪರವಾನಗಿ ನೀತಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ನವದೆಹಲಿ(ಪಿಟಿಐ): ದೂರವಾಣಿ ಸೇವಾ ಸಂಸ್ಥೆಗಳು ತಮ್ಮ ವೃತ್ತದಲ್ಲಿ ಯಾವುದೇ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಸೇವೆ ಒದಗಿಸಬಹುದಾದ ಏಕರೂಪದ ದೂರಸಂಪರ್ಕ ಪರವಾನಗಿ ನೀತಿಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ದೂರವಾಣಿ ಸೇವಾ ಸಂಸ್ಥೆಗಳು ಹೊಸ ನೀತಿಗೆ ಬದಲಾಗುವುದು ಅನಿವಾರ್ಯ. ಕಂಪೆನಿಗಳು ದೂರವಾಣಿ ಸೇವೆಗಳಿಂದ ಬರುವ ವಾರ್ಷಿಕ ವರಮಾನದಲ್ಲಿ ಶೇ 8ರಷ್ಟನ್ನು ಪರವಾನಗಿ ಶುಲ್ಕವಾಗಿ ಪಾವತಿಸಬೇಕು. ಈ ಪರವಾನಗಿ ಅವಧಿ 20 ವರ್ಷ. 10 ವರ್ಷಕ್ಕೊಮ್ಮೆ ನವೀಕರಿಸಬೇಕು ಎಂದು ದೂರವಾಣಿ ಇಲಾಖೆ ಹೇಳಿದೆ.

ಹೊಸ ನೀತಿಯಡಿ ಕಂಪೆನಿಗಳು ತಮ್ಮ ವೃತ್ತದಲ್ಲಿ ಯಾವುದೇ ತಂತ್ರಜ್ಞಾನ ಬಳಸಿ ಮೊಬೈಲ್ ಅಥವಾ ಸ್ಥಿರ ದೂರವಾಣಿ ಸೇವೆ ಒದಗಿಸಬಹುದು. ಗ್ರಾಹಕರಿಗೆ ಇಂಟರ್‌ನೆಟ್ ಮತ್ತು ಟಿವಿ ಸೇವೆಗಳನ್ನೂ ನೀಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.