ADVERTISEMENT

ದೆಹಲಿ:ವಾಹನ ಮೇಳಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ನವದೆಹಲಿ (ಪಿಟಿಐ): ಕಳೆದ ಒಂದು ವಾರದಿಂದ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿದ್ದ 11ನೇ ಅಂತರರಾಷ್ಟ್ರೀಯ ವಾಹನ ಮೇಳಕ್ಕೆ ಬುಧವಾರ ತೆರೆಬಿದ್ದಿತು.

ವಾಹನ ಮೇಳದ ಸಂಘಟನಾ ಸಂಸ್ಥೆಗಳಾದ ಭಾರತೀಯ ವಾಹನ ತಯಾರಕರ ಸಂಘ (ಎಸ್‌ಐಎಎಂ) ವಾಹನಗಳ ಬಿಡಿಭಾಗಗಳ ತಯಾರಕರ ಒಕ್ಕೂಟ (ಎಸಿಎಂಎ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮುಂದಿನ ಪ್ರದರ್ಶನವನ್ನು ಫೆಬ್ರುವರಿ 5, 2014ರಂದು ನಡೆಸಲು ನಿರ್ಧರಿಸಿವೆ. ಈ ಬಾರಿಯ ವಾಹನ ಮೇಳವನ್ನು ಸುಮಾರು 7 ಲಕ್ಷ ಜನರು ವೀಕ್ಷಿಸಿದರು. 24 ದೇಶಗಳ 1,500 ಪ್ರದರ್ಶನಕಾರರು ಭಾಗವಹಿಸಿದ್ದರು. 50 ಜಾಗತಿಕ ಬ್ರಾಂಡ್‌ಗಳು 12 ಪರಿಸರ ಸ್ನೇಹಿ ವಾಹನ ಸೇರಿದಂತೆ 58 ಹೊಸ ವಾಹನಗಳನ್ನು  ಪರಿಚಯಿಸಿದವು.

ಮೂಲಸೌಕರ್ಯ ಮತ್ತು ಭದ್ರತೆಯ ಕಾರಣಗಳಿಂದ ಜನರ  ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೂ ವೀಕ್ಷಕರ ಸಂಖ್ಯೆಯಲ್ಲಿ ಶಾಂಘೈ ನಂತರ ಪ್ರಪಂಚದಲ್ಲಿಯೇ ಎರಡನೆಯ ಅತಿ ದೊಡ್ಡ  ವಾಹನ ಮೇಳ ಇದಾಗಿತ್ತು ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ರಾಜೀವ್ ಕೌಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.