ADVERTISEMENT

ದೇಶ ಪ್ರವಾಸದಿಂದ ಲೋಕಜ್ಞಾನ ಪ್ರಾಪ್ತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಮುಂಬೈ: ಪ್ರವಾಸ ಮಾಡುವುದರಿಂದ ಲೋಕಜ್ಞಾನ ಪ್ರಾಪ್ತಿಯಾಗುವುದು ಎಂದು ಗೋರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷ ಪಯ್ಯಾರು ಕೆ.ರಮೇಶ್ ಅವರು ಇಲ್ಲಿ ಹೇಳಿದರು.

ಇಲ್ಲಿನ ಗೋರೆಗಾಂವ್ ಕರ್ನಾಟಕ ಸಂಘದ ಶ್ರೀನಿವಾಸ ಜೋಕಟ್ಟೆ ಅವರ ಪ್ರವಾಸ ಸಂಕಲನ `ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ~ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೃತಿಯನ್ನು ಖ್ಯಾತ ಛಾಯಾಗ್ರಾಹಕ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಬಿಡುಗಡೆ ಮಾಡಿದರು. ಕೃತಿಯಲ್ಲಿ ಪ್ರವಾಸಿ ತಾಣ, ಧಾರ್ಮಿಕ ಸ್ಥಳ ಹೀಗೆ ಎಲ್ಲ ಸ್ಥಳಗಳಿಗೆ ಸಂಬಂಧಪಟ್ಟ ಲೇಖನಗಳಿವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ಜಿ.ಟಿ. ಆಚಾರ್ಯ ಅವರು ಪ್ರವಾಸಗಳ ನೆನಪುಗಳನ್ನು ದಾಖಲಿಸುವ ಕೆಲಸ ಹೆಚ್ಚು ಆಗಬೇಕೆಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.