ADVERTISEMENT

ನಗದು ಚಲಾವಣೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:11 IST
Last Updated 10 ಏಪ್ರಿಲ್ 2018, 19:11 IST

ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ನಂತರದ ದಿನಗಳಲ್ಲಿ ನಗದುರಹಿತ (ಡಿಜಿಟಲ್‌) ವಹಿವಾಟು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದರೂ ನೋಟುಗಳ ಚಲಾವಣೆ ಗರಿಷ್ಠ ಮಟ್ಟದಲ್ಲಿ ಇದೆ.

ಸದ್ಯಕ್ಕೆ ದೇಶದಲ್ಲಿನ ನಗದು ಚಲಾವಣೆಯು ನೋಟು ರದ್ದತಿ ಮುಂಚಿನ ಮಟ್ಟವನ್ನೂ ಮೀರಿದೆ. ಹಣಕಾಸು ವ್ಯವಸ್ಥೆಯಲ್ಲಿ ₹ 17.97 ಲಕ್ಷ ಕೋಟಿಗಳಷ್ಟು ಮೊತ್ತದ ನೋಟುಗಳು ಚಲಾವಣೆಯಲ್ಲಿ ಇವೆ. ಇದು 2016ರ ನವೆಂಬರ್‌ ತಿಂಗಳಲ್ಲಿ ಇದ್ದ ₹ 17.64 ಲಕ್ಷ ಕೋಟಿಗಳಿಗಿಂತ ಶೇ 1.9ರಷ್ಟು  ಹೆಚ್ಚಿಗೆ ಇದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬಳಿ ಇರುವ ಅಂಕಿ ಅಂಶಗಳೇ ಇದನ್ನು ದೃಢಪಡಿಸುತ್ತವೆ.

ಒಂದೂವರೆ ವರ್ಷದ ಹಿಂದೆ ಕೈಗೊಂಡ ನೋಟು ರದ್ದತಿಯಿಂದ ದೇಶದಲ್ಲಿ ನಗದು ಅಭಾವ ಉಂಟಾಗಿತ್ತು. ಎರಡು ತಿಂಗಳ ಕಾಲ ನೋಟುಗಳ ಚಲಾವಣೆಯು ಶೇ 51ರಷ್ಟು ಕಡಿಮೆಯಾಗಿತ್ತು.

ADVERTISEMENT

ಈ ವರ್ಷದ ಮಾರ್ಚ್‌ ತಿಂಗಳ ಮಧ್ಯಭಾಗದಿಂದ ನೋಟುಗಳ ಚಲಾವಣೆಯು, ನೋಟು ರದ್ದತಿ ಹಿಂದಿನ ಮಟ್ಟವನ್ನು ಮೀರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.