ನವದೆಹಲಿ(ಪಿಟಿಐ):ದ್ವಿಚಕ್ರ ವಾಹನ ತಯಾರಿಕೆಯಲ್ಲಿ ದೇಶದ ಎರಡನೇ ಅತಿದೊಡ್ಡ ವಾಹನೋದ್ಯಮ ಕಂಪೆನಿ ಎನಿಸಿಕೊಂಡಿರುವ ಬಜಾಜ್ ಆಟೊ ಲಿ., ಯುವಕರ ಮೆಚ್ಚಿನ `ಪಲ್ಸರ್~ ಮೋಟಾರ್ ಬೈಕ್ ಮಾರಾಟದಲ್ಲಿ ಗುರುವಾರ 50 ಲಕ್ಷದ ಗಡಿ ದಾಟಿದೆ.
150 ಸಿಸಿ ಮತ್ತು 180 ಸಿಸಿ ಸಾಮರ್ಥ್ಯದೊಂದಿಗೆ 10 ವರ್ಷಗಳ ಹಿಂದೆ(2001 ನವೆಂಬರ್) ರಸ್ತೆಗಿಳಿದ `ಪಲ್ಸರ್~ನ ಇದೀಗ 135 ಸಿಸಿ ಮತ್ತು 220 ಸಿಸಿ (ಸ್ಟ್ರೀಟ್ಫೈಟರ್) ಮಾದರಿಯಲ್ಲಿಯೂ ಇದೆ ಎಂದು ಬಿಎಎಲ್ ಮೋಟಾರ್ ಬೈಕ್ ಮಾರಾಟ ವಿಭಾಗ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.