ADVERTISEMENT

ಪಶ್ಮಿನಾ: ಚೆಕ್ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು: ಅವಕಾಶ ವಂಚಿತರಿಗೆ ಸೂರು ಒದಗಿಸುವ ಸದುದ್ದೇಶ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ, ಕಟ್ಟಡ ನಿರ್ಮಾಣ ಸಂಸ್ಥೆ ಪಶ್ಮಿನಾ ಡೆವಲಪರ್ಸ್ 100 ಮನೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಅಂತರರಾಷ್ಟ್ರೀಯ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ `ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ~ಯ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ನಗರದ ಹಳೆ ಮದ್ರಾಸ್ ರಸ್ತೆಯಲ್ಲಿ ಕಾರ್ಯಗತಗೊಳ್ಳುತ್ತಿರುವ `ಪಶ್ಮಿನಾ ವಾಟರ್‌ಫ್ರಂಟ್~ ಯೋಜನೆಯಲ್ಲಿ ಮಾರಾಟವಾಗುವ ಪ್ರತಿ ಒಂದು ಅಪಾರ್ಟ್‌ಮೆಂಟ್‌ಗೆ ಪ್ರತಿಯಾಗಿ ರಾಜ್ಯದಲ್ಲಿ ಬಡವರಿಗೆ ಒಂದು ಮನೆ ಉಚಿತವಾಗಿ ಕೊಡುಗೆ ರೂಪದಲ್ಲಿ ನೀಡಲಾಗುವುದು.  ಈ ಯೋಜನೆಯಡಿ ಮೂರು ವರ್ಷಗಳಲ್ಲಿ 1,200 ಮನೆಗಳನ್ನು ಒದಗಿಸಲು ಪಶ್ಮಿನಾ ಉದ್ದೇಶಿಸಿದೆ.

ಮೊದಲ ಹಂತದಲ್ಲಿ 100 ಮನೆಗಳನ್ನು ಒದಗಿಸಲು ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿಗೆ ಚೆಕ್ ಹಸ್ತಾಂತರಿಸಲಾಯಿತು. ನಗರದಲ್ಲಿ ನಡೆದ ಸಮಾರಂಭದಲ್ಲಿ  ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ (ಇಂಡಿಯಾ) ಅಧ್ಯಕ್ಷ  ಫರ್ನಾಂಡೀಸ್ ಝೋಬಲ್ ಅಯಲಾ ಅವರಿಗೆ ಪಶ್ಮಿನಾ ಸಮೂಹದ ಅಧ್ಯಕ್ಷ ಅಸಿತ್ ಕೊಟಿಚಾ ಅವರು ಚೆಕ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.