ADVERTISEMENT

ಪೇಟೆ ಮೇಲೆ ಜಿಎಸ್‌ಟಿ, ಮುಂಗಾರು ಪ್ರಭಾವ

ಪಿಟಿಐ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ಪೇಟೆ ಮೇಲೆ ಜಿಎಸ್‌ಟಿ, ಮುಂಗಾರು ಪ್ರಭಾವ
ಪೇಟೆ ಮೇಲೆ ಜಿಎಸ್‌ಟಿ, ಮುಂಗಾರು ಪ್ರಭಾವ   

ನವದೆಹಲಿ: ಮುಂಗಾರು ಮಳೆಯ ಪ್ರಮಾಣ ಮತ್ತು ಏಕರೂಪದ ತೆರಿಗೆ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ನಡೆಯುತ್ತಿರುವ ಸಿದ್ಧತೆ ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ತಜ್ಞರು ಹೇಳಿದ್ದಾರೆ.

‘ಆರ್ಥಿಕತೆ ಮೇಲೆ ಪ್ರಭಾವ ಬೀರುವಂತಹ ಯಾವುದೇ ಹೊಸ ವಿದ್ಯಮಾನಗಳು ಇಲ್ಲದೇ ಇರುವುದರಿಂದ ಷೇರುಗಳ ಮೌಲ್ಯದ ಆಧಾರದ ಮೇಲೆ ವಹಿವಾಟಿನ ದಿಕ್ಕು ನಿರ್ಧಾರವಾಗಲಿದೆ’ ಎಂದು ಟ್ರೇಡ್‌ ಸ್ಮಾರ್ಟ್‌ ಆನ್‌ಲೈನ್‌ ಕಂಪೆನಿಯ ಸ್ಥಾಪಕ ವಿಜಯ್‌ ಸಿಂಘಾನಿಯಾ ಹೇಳಿದ್ದಾರೆ.

ಕಳೆದ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 206 ಅಂಶಗಳಷ್ಟು ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 80 ಅಂಶ ಇಳಿಕೆ ಕಂಡಿವೆ. ಇದರಿಂದ ಸತತ ಎರಡನೇ ವಾರ ಸೂಚ್ಯಂಕಗಳು ಇಳಿಮುಖವಾಗಿ ವಹಿವಾಟು ಅಂತ್ಯ ಕಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.